ರಾಯಚೂರು: ಕೆಟ್ಟು ನಿಂತಿದ್ದ ಲಾರಿಗೆ ಕಬ್ಬಿಣ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಲಿನರ್ ಹಾಗೂ ಚಾಲಕ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಮುಳ್ಳೂರು ಕ್ರಾಸ್ ಬಳಿ ನಡೆದಿದೆ.
ಮಹಾರಾಷ್ಟ್ರ ಮೂಲದ ಸವಳೂರು ಗ್ರಾಮದ ರಾಹುಲ್ ಭಾಸ್ಕರ್ (25), ವೈಜನಾಥ (28) ಮೃತ ದುರ್ದೈವಿಗಳು. ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದು, ವೈಜನಾಥ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಸ್ಕಿ-ಸಿಂಧನೂರು ರಸ್ತೆಯ ಮುಳ್ಳೂರು ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ನಾಸಿಕ್‍ನಿಂದ ಬಳ್ಳಾರಿ ಕಡೆಗೆ ಕಬ್ಬಿಣದ ಪೈಪ್‍ಗಳನ್ನ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿನ ಕಬ್ಬಿಣದ ಸರಳುಗಳು ಡಿಕ್ಕಿ ಹೊಡೆದ ಲಾರಿಗೆ ನುಗ್ಗಿ ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ವೈಜನಾಥ್ ಅವರನ್ನು ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈಜನಾಥ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.