ರಾಯಚೂರು: ಇಡೀ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆಯ (Ayodhya) ರಾಮಮಂದಿರದ (Ram Mandir) ರಾಮನ ಪ್ರಾಣಪ್ರತಿಷ್ಠೆಗೆ ನಾಲ್ಕೇ ದಿನಗಳು ಬಾಕಿ ಇವೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆದಿದೆ. ಇನ್ನೂ ರಾಮಮಂದಿರ ನಿರ್ಮಾಣದಲ್ಲಿ ಶಿಲೆಯಿಂದ ಶಿಲ್ಪಿವರೆಗೂ ರಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. ರಾಯಚೂರಿನ (Raichur) ಯುವ ಶಿಲ್ಪಿಯೊಬ್ಬರು ರಾಮಮಂದಿರಕ್ಕೆ ತಮ್ಮ ಕಲಾ ಸೇವೆ ಮಾಡಿದ್ದಾರೆ.
Advertisement
ಮಾನ್ವಿ ತಾಲೂಕಿನ ಜಾನೇಕಲ್ ಗ್ರಾಮದ ಯುವ ಶಿಲ್ಪಿ ವಿರೇಶ್ ಬಡಿಗೇರ್ ಒಂದು ತಿಂಗಳ ಕಾಲ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿ, ಈಗ ರಾಜ್ಯಕ್ಕೆ ಮರಳಿದ್ದಾರೆ. ರಾಮಮಂದಿರದ ಮಂಟಪಗಳಲ್ಲಿ ಕುಸರಿ ಕೆಲಸಗಳನ್ನು ಮಾಡಿದ್ದಾರೆ. ಮಂದಿರದ ಪಿಲ್ಲರ್‍ಗಳಿಗೆ ನವಿಲು ಹಾಗೂ ಹಂಸ ಪಕ್ಷಿಗಳ ವಿನ್ಯಾಸ ಮಾಡಿದ್ದಾರೆ. ಹಿರಿಯ ಶಿಲ್ಪಿಯೊಬ್ಬರ ಸಹಕಾರದಿಂದ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಅವಕಾಶ ಸಿಕ್ಕಿದೆ. ರಾಜ್ಯದ ಕೆಲವು ಶಿಲ್ಪಿಗಳಲ್ಲಿ ನಾನು ಒಬ್ಬ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:
Advertisement
Advertisement
ಶಿಲ್ಪಕಲೆಯಲ್ಲಿ ಪದವಿ ಪಡೆದು 10 ವರ್ಷಗಳ ಅನುಭವವಿರುವ ಯುವ ಶಿಲ್ಪಿ ವಿರೇಶ್ ಬಡಿಗೇರ್ ಈ ಬಗ್ಗೆ ಪ್ರತಿಕ್ರಿಯಿಸಿ, ರಾಮನ ಸೇವೆಗಾಗಿ ಅಯೋಧ್ಯೆಗೆ ಹೋಗಿದ್ದೆ. ಈ ಅವಕಾಶ ಸಿಕ್ಕಿದ್ದೇ ದೊಡ್ಡ ಪುಣ್ಯ, ಪುನಃ ಮಾರ್ಚ್ ತಿಂಗಳಲ್ಲಿ ಅಯೋಧ್ಯೆಗೆ ತೆರಳಿ ಇನ್ನಷ್ಟು ಕುಸರಿ ಕೆಲಸಗಳನ್ನ ಮಾಡುವುದಾಗಿ ತಿಳಿಸಿದ್ದಾರೆ.
Advertisement
ರಾಮಮಂದಿರದ ಕೆಲಸದಲ್ಲಿ ತಮ್ಮ ಗ್ರಾಮದ ಯುವಕ ಪಾಲ್ಗೊಂಡಿದ್ದನ್ನು ಗ್ರಾಮಸ್ಥರು ವಿಶೇಷವಾಗಿ ಸಂಭ್ರಮಿಸಿದ್ದಾರೆ. ರಾಮಭಕ್ತರು ಹಾಗೂ ಗ್ರಾಮಸ್ಥರು ವಿರೇಶ್ ಅವರಿಗೆ ಸನ್ಮಾನಿಸುವ ಮೂಲಕ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: