ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಗೆ ಎಲ್ಲೆಡೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಿರವಾರ ತಾಲೂಕಿನ ಕೆ ತುಪ್ಪದೂರು ಗ್ರಾಮದಲ್ಲಿ ತುಂಬು ಗರ್ಭಿಣಿ (Pregnant) ರಸ್ತೆ ಮಾರ್ಗವಿಲ್ಲದೆ ಪರದಾಡಿದ್ದಾರೆ. ಗರ್ಭಿಣಿ ಯಲ್ಲಮ್ಮ ಹಳ್ಳದ ಸೇತುವೆ ಮುಳುಗಡೆಯಾದ ಕಾರಣ ಸುಮಾರು 4 ಕಿ.ಮೀ ಸುತ್ತುವರಿದು ಎತ್ತಿನ ಬಂಡಿಯಲ್ಲಿ ಆಸ್ಪತ್ರೆ (Hospital) ಗೆ ತೆರಳಿದ್ದಾಳೆ.
Advertisement
ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆ ರಸ್ತೆ ಸ್ಥಗಿತಗೊಂಡಿದ್ದರಿಂದ ಕೆ.ತುಪ್ಪದೂರಿಗೆ ಬರಲಾಗದೇ ನಾಲ್ಕು ಕಿ.ಮಿ ದೂರದಲ್ಲೇ ಅಂಬುಲೆನ್ಸ್ (Ambulance) ನಿಲ್ಲಿಸಲಾಗಿತ್ತು. ಎತ್ತಿನ ಬಂಡಿಯಲ್ಲಿ ನಾಲ್ಕು ಕಿಮೀ ದೂರದವರೆಗೆ ಗರ್ಭಿಣಿ ಯಲ್ಲಮ್ಮಳನ್ನ ಕುಟುಂಬಸ್ಥರು ಕರೆದೊಯ್ದಿದ್ದಾರೆ. ಬಳಿಕ ಅಲ್ಲಿಂದ ಅಂಬುಲೆನ್ಸ್ ಮೂಲಕ ಕಲ್ಲೂರು ಸರ್ಕಾರಿ ಆಸ್ಪತ್ರೆ (Government Hospital) ಗೆ ದಾಖಲು ಮಾಡಲಾಗಿದೆ.
Advertisement
Advertisement
ಆಸ್ಪತ್ರೆಗೆ ದಾಖಲಾಗಿ ಕೆಲವೇ ಕ್ಷಣಗಳಲ್ಲಿ ಯಲ್ಲಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಆದರೆ ಸೇತುವೆ ಸಮಸ್ಯೆಗೆ ತುಂಬು ಗರ್ಭಿಣಿ ಪರದಾಡಬೇಕಾಯಿತು. ಹೀಗಾಗಿ ಗ್ರಾಮಸ್ಥರು ಕೂಡಲೇ ಹೊಸ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಓಲಾ, ಊಬರ್‌ಗೆ ಬಿಗ್ ರಿಲೀಫ್ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ