ರಾಯಚೂರು: ಜಿಲ್ಲೆಯ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಕಳ್ಳಾಟ ಕುರಿತ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಆರ್‌ಟಿಪಿಎಸ್ (RTPS) ಹಾಗೂ ವೈಟಿಪಿಎಸ್ (YTPS) ಅಧಿಕಾರಿಗಳು ಈಗ ಅಲರ್ಟ್ ಆಗಿದ್ದಾರೆ. ಕಲ್ಲಿದ್ದಲು ಕಳ್ಳತನ (Coal Theft) ಆರೋಪಿಸಿ ರೈಲ್ವೆ ವ್ಯಾಗಾನ್ ಸ್ವಚ್ಛತಾ ಗುತ್ತಿಗೆದಾರ (Contractor) ಶ್ರೀನಿವಾಸಲು ಹಾಗೂ ಯರಮರಸ್ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ವೈಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ಮಹೇಂದ್ರ ರಾಯಚೂರು (Raichir) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ವೈಟಿಪಿಎಸ್‌ಗೆ ಬಂದ ಕಲ್ಲಿದ್ದಲಿನಲ್ಲಿ ಕಳ್ಳತನ ನಡೆದಿದೆ. ಅಕ್ಟೋಬರ್ 19 ರಿಂದ ನವೆಂಬರ್ 20 ರವರೆಗೆ ಅಂದಾಜು 5 ಲಕ್ಷ ರೂ. ಮೌಲ್ಯದ ಸುಮಾರು 120 ಮೆಟ್ರಿಕ್ ಟನ್ ಕಚ್ಚಾ ಕಲ್ಲಿದ್ದಲು ಕಳ್ಳತನ ಮಾಡಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಲ್ಲಿದ್ದಲು ಕಳ್ಳತನ ಕೇಸ್ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?
ಇನ್ನೂ ಆರ್‌ಟಿಪಿಎಸ್ ಅಧಿಕಾರಿಗಳು ಕಲ್ಲಿದ್ದಲು ಕಳ್ಳತನ ವಿದ್ಯುತ್ ಕೇಂದ್ರದ ಹೊರಗಡೆ ನಡೆದಿದೆ, ತನಿಖೆ ಮಾಡಿ ಎಂದು ಪೊಲೀಸರಿಗೆ ಅರ್ಜಿ ನೀಡಿದ್ದಾರೆ. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪ್ರಕರಣ ದಾಖಲಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: PUBLiC TV Impact ನೂರಾರು ಟನ್ ಕಲ್ಲಿದ್ದಲು ಕಳ್ಳತನ – ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಶಾಕ್, ತನಿಖೆಗೆ ಆದೇಶ
ಏನಿದು ಪ್ರಕರಣ?
ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಸರಬರಾಜು ಮಾಡುತ್ತಿವೆ. ಈಗ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ಹಿಂದೆ ಬಿದ್ದಿವೆ. ಇದರ ಹಿಂದೆ ಕಲ್ಲಿದ್ದಲು ಕಳ್ಳಾಟ ನಡೆಯುತ್ತಿರುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲು ಮಾಡಿತ್ತು. ಇದನ್ನೂ ಓದಿ: ವಿದ್ಯುತ್ ಕೊರತೆ ಮಧ್ಯೆ ಕಲ್ಲಿದ್ದಲು ಕಳ್ಳಾಟ – ಕಳ್ಳರ ಪಾಲಾಗುತ್ತಿದೆ ಟನ್‌ಗಟ್ಟಲೇ ಕಲ್ಲಿದ್ದಲು
ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಸರಬರಾಜಾಗುವ ಕಲ್ಲಿದ್ದಲನ್ನು ಸಂಪೂರ್ಣವಾಗಿ ಬಳಕೆ ಮಾಡದೆ, ಅಲ್ಪ ಪ್ರಮಾಣದ ಕಲ್ಲಿದ್ದಲನ್ನು ಉಳಿಸಿ ಕಳುಹಿಸುತ್ತಿರುವುದು ಬಯಲಾಗಿದೆ. ಈ ಅಲ್ಪ ಪ್ರಮಾಣದ ಕಲ್ಲಿದ್ದಲೇ ಈಗ ನೂರಾರು ಟನ್ ಇದ್ದು, ಲಕ್ಷಾಂತರ ರೂಪಾಯಿ ಗೋಲ್ ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಲ್ಲಿದ್ದಲು ರೇಕ್‌ನ ವ್ಯಾಗನಾರ್‌ಗಳ ಸ್ವಚ್ಛತೆ ಹೆಸರಲ್ಲಿ ಟನ್‌ಗಟ್ಟಲೇ ಕಲ್ಲಿದ್ದಲು ಮಾಯಾವಾಗುತ್ತಿದೆ. ಇಡೀ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದರೆ ಇಲ್ಲಿ ಕಲ್ಲಿದ್ದಲಿನ ಕಳ್ಳ ದಂಧೆ ನಡೆಯುತ್ತಿರೋದು ಸ್ಪಷ್ಟವಾಗಿದೆ. ಇದನ್ನೂ ಓದಿ: ಕರ್ನಾಟಕದ ಹಿಂದೂಗಳು ಒಂದಾಗಬೇಕು: ಯತ್ನಾಳ್