ರಾಯಚೂರು: ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐ ಒಬ್ಬರು ಲಂಚ ಪಡೆಯುತ್ತಿರುವ ಘಟನೆ ರಾಯಚೂರಿನ ಹೆದ್ದಾರಿಯಲ್ಲಿ ನಡೆದಿದೆ.
ರಾಯಚೂರು ನಗರದ ಮಧ್ಯೆ ಹಾದು ಹೋಗುವ ನಂದಿ ದೇವಾಸ್ಥಾನದ ಹತ್ತಿರದ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಆಂಧ್ರ ಮೂಲದ ಟ್ರಕ್ ಚಾಲಕನಿಂದ 300 ರೂಪಾಯಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.
Advertisement
Advertisement
ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನ ಮತ್ತು ಲಾರಿ ದಾಖಲೆ ಪರಿಶೀಲಿಸಿ ದಂಡ ವಿಧಿಸಬೇಕಾದ ಪೊಲೀಸರು ಲಂಚ ವಸೂಲಿ ದಂಧೆ ಮಾಡುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಕ್ಯಾರೆ ಎನ್ನದ ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್‍ಐ ಲಂಚ ತೆಗೆದುಕೊಳ್ಳುವಲ್ಲಿ ಮಗ್ನನಾಗಿದ್ದಾರೆ.
Advertisement
ಪೊಲೀಸರಿಗೆ ಹಣ ನೀಡಿ ರಶೀದಿ ಪಡೆಯದೇ ದಾರಿಯುದ್ದಕ್ಕೂ ಎಷ್ಟು ಜನರಿಗೆ ಕೋಡಬೇಕು ಎಂದು ಲಾರಿ ಚಾಲಕ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಅವರಿವರದ್ದು ಬೇಡ ಇಲ್ಲಿ ಕೊಟ್ಟು ಮುಂದೆ ಹೋಗುತ್ತಾ ಇರು ಎಂದು ರಾಜಾರೋಷವಾಗಿ ಲಂಚ ಪಡೆದು ಬಿಲ್ ನೀಡದೆ ಬಿಟ್ಟು ಕಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.