ರಾಯಚೂರು: ಯಮನ ವೇಷ ಧರಿಸಿ ಪೊಲೀಸ್ ಸಿಬ್ಬಂದಿ ಜನರನ್ನ ಚದುರಿಸುವ ಮೂಲಕ ರಾಯಚೂರಿನಲ್ಲಿ ಕೊರೊನಾ ಜಾಗೃತಿ ಮೂಡಿಸಿದರು. ಲಾಕ್‍ಡೌನ್ ಸಡಿಲಿಕೆ ಹಾಗೂ ಮದ್ಯದಂಗಡಿ ಆರಂಭ ಹಿನ್ನೆಲೆ ಜನರ ಓಡಾಟ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಜನ ಜಾಗೃತಿಗೆ ಮುಂದಾಗಿದೆ.
ಪೊಲೀಸ್ ಸಿಬ್ಬಂದಿಗಳೇ ವೇಷ ಹಾಕಿಕೊಂಡು ಬೀದಿನಾಟಕ ಮಾಡಿದರು. ನೂರಾರು ಜನ ಪೊಲೀಸರು ನಗರದ ವಿವಿಧ ರಸ್ತೆಗಳಲ್ಲಿ ಪರೇಡ್ ಮಾಡುವ ಮೂಲಕ ಜನರಲ್ಲಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದರು. ಪೊಲೀಸರಿಗೆ ಚಪ್ಪಾಳೆ ಮೂಲಕ ರಸ್ತೆಗಳಲ್ಲಿ ಸ್ವಾಗತಿಸಿದ ಸಾರ್ವಜನಿಕರು ವ್ಯಾಪಾರಿಗಳು ಹೂವಿನ ಹಾರ ಹಾಕಿ ಸನ್ಮಾನಿಸಿದರು.
Advertisement
Advertisement
ಲಾಕ್‍ಡೌನ್ ನಲ್ಲಿ ಬಹುತೇಕ ವಿನಾಯಿತಿ ಸಿಕ್ಕಿರುವುದರಿಂದ ಜನ ಎಗ್ಗಿಲ್ಲದೆ ಅನಾವಶ್ಯಕವಾಗಿ ಓಡಾಡುತ್ತಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ. ಹೀಗಾಗಿ ಈಗಲೇ ಲಾಕ್‍ಡೌನ್ ಮುಗಿದಿಲ್ಲ. ಮೇ 17 ರ ವರೆಗೆ ಲಾಕ್‍ಡೌನ್ ಮುಂದುವರಿಯುತ್ತೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರೇಡ್ ವೇಳೆ ಹೇಳಿದ್ದಾರೆ.