ರಾಯಚೂರು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲೆಯಲ್ಲಿ ನೂರಾರು ಜನ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ.
ಮತದಾರರ ಪಟ್ಟಿಯಲ್ಲಿ ಮಹಾಗೊಂದಲವನ್ನ ಸೃಷ್ಟಿಸಿರುವ ಅಧಿಕಾರಿಗಳು ಬದುಕಿರುವ ಮತದಾರರ ಹೆಸರನ್ನೆ ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದಾರೆ. ರಾಯಚೂರು ತಾಲೂಕಿನ ಜಾಗೀರ್ ವೆಂಕಟಾಪುರ ಗ್ರಾಮವೊಂದರಲ್ಲೆ 20ಕ್ಕೂ ಹೆಚ್ಚು ಮತದಾರರಿಗೆ ವಂಚನೆಯಾಗಿದೆ.
Advertisement
ಬೇರೆ ಬೇರೆ ಗ್ರಾಮಗಳು ಸೇರಿದಂತೆ ನೂರಾರು ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ಹೀಗಾಗಿ ಗ್ರಾಮಸ್ಥರು ನಾವು ಬದುಕಿದ್ದೇವೆ ನಮಗೆ ಮತದಾನಕ್ಕೆ ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.
Advertisement
Advertisement
ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ಫೋಟೋದಲ್ಲೂ ತಪ್ಪು ಮಾಹಿತಿಯನ್ನ ಮುದ್ರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಅರ್ಜಿ ಸಲ್ಲಿಸದೇ ಇದ್ದರೂ ಮತದಾರರ ಬೂತ್‍ಗಳ ಬದಲಾವಣೆ ಮಾಡಿ ಮತದಾರರಿಗೆ ಅನಾನುಕೂಲ ಮಾಡಲಾಗಿದೆ.
Advertisement
ರಾಯಚೂರಿನಲ್ಲಿ ಮುಸ್ಲಿಮರು ವಾಸಮಾಡುವ ಎಲ್‍ಬಿಎಸ್ ನಗರ ಸೇರಿ ಇತರ ವಾರ್ಡ್ ಗಳ ಮತದಾರರನ್ನು ಬೇರೆ ವಾರ್ಡ್ ಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಗೊಂದಲಕ್ಕೆ ರಾಯಚೂರು ತಹಶಿಲ್ದಾರ್ ಡಾ.ಹಂಪಣ್ಣ ಸಜ್ಜನ್ ಹಾಗೂ ಶಿರಸ್ತೆದಾರ್ ಕಾರಣ ಅಂತ ಮುಸ್ಲಿಂ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಲೀಟ್ ಪ್ರಕ್ರಿಯೆ ಹೇಗೆ ನಡೆಯುತ್ತೆ?
ಮತದಾರ ಒಂದು ಗ್ರಾಮದಲ್ಲಿ ವಾಸಿಸುತ್ತಿದ್ದರೆ ಆತ ಬದುಕಿರುವವರೆಗೂ ಮತದಾನದ ಪಟ್ಟಿಯಲ್ಲಿ ಹೆಸರು ಇರುತ್ತದೆ. ಒಂದು ವೇಳೆ ಮತದಾರ ಮೃತಪಟ್ಟರೆ ಮಾತ್ರ ಮತದಾನದ ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡಲಾಗುತ್ತದೆ. ಇಲ್ಲವಾದಲ್ಲಿ ಮತದಾರ ಬೇರೆ ಗ್ರಾಮ-ನಗರಕ್ಕೆ ಹೋಗಿ ನೆಲೆಸಿದರೆ, ಮತದಾರ ತಮ್ಮ ಮತದಾನದ ಬೂತ್‍ಗಳ ಬದಲಾವಣೆ ಮಾಡಿ ಎಂದು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಆಗ ಅಧಿಕಾರಿಗಳು ಪರಿಶೀಲನೆ ನಡೆಸಿ ಮತದಾರನ ವಿಳಾಸಕ್ಕೆ ಬೂತ್‍ಗಳ ಬದಲಾವಣೆ ಮಾಡಿ ನಂತರ ಪಟ್ಟಿಯಿಂದ ಡಿಲೀಟ್ ಮಾಡಬೇಕಾಗುತ್ತದೆ.