ರಾಯಚೂರು: ರಸ್ತೆ ದಾಟುವಾಗ ಸರ್ಕಾರಿ ಬಸ್ ಹರಿದು ಪಾದಚಾರಿ ವೃದ್ಧೆ ಸಾವನ್ನಪ್ಪಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ತಿಂಥಿಣಿ ಸೇತುವೆ ಬಳಿ ನಡೆದಿದೆ.ಇದನ್ನೂ ಓದಿ: BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ
Advertisement
ಮೃತ ವೃದ್ಧೆಯನ್ನು ಜಾಲಹಳ್ಳಿ ಗ್ರಾಮದ ನಿವಾಸಿ ದುರುಗಮ್ಮ (72) ಎಂದು ಗುರುತಿಸಲಾಗಿದೆ.
Advertisement
ಸರ್ಕಾರಿ ಬಸ್ ಯಾದಗಿರಿ ಜಿಲ್ಲೆಯ ಶಹಪುರದಿಂದ ಬಳ್ಳಾರಿಗೆ ಹೊರಟಿತ್ತು. ಇದೇ ಸಮಯದಲ್ಲಿ ತಿಂಥಣಿ ಸೇತುವೆ ಬಳಿ ವೃದ್ಧೆ ರಸ್ತೆ ದಾಟುತ್ತಿದ್ದರು. ಈ ವೇಳೆ ವೃದ್ಧೆಯ ಮೇಲೆ ಬಸ್ ಹರಿದು ಅವಘಡ ಸಂಭವಿಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸದ್ಯ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ | ಭದ್ರತಾ ಪಡೆ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಹತ್ಯೆ