ರಾಯಚೂರು: ಸಾಕು ಪ್ರಾಣಿಗಳನ್ನು ಕೆಲವರು ತುಂಬಾನೆ ಹಚ್ಚಿಕೊಂಡಿರುತ್ತಾರೆ. ಅವುಗಳಿಗೆ ಏನಾದ್ರೂ ಆದರೆ ಬಿಕ್ಕಿಬಿಕ್ಕಿ ಅಳುತ್ತಾರೆ. ಆದರೆ ಸಾಕಿ ಬೆಳೆಸಿದ ಯಜಮಾನ ಸಾವನ್ನಪ್ಪಿದ್ದರಿಂದ ಮೇಕೆಯೊಂದು ಕಂಬನಿ ಮಿಡಿದ ಅಪರೂಪದ ಘಟನೆ ಮಾನ್ವಿ ತಾಲೂಕಿನ ಮರಕಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಮರಕಲದಿನ್ನಿ ಗ್ರಾಮದ ಅಮರಪ್ಪ (48) ಹೃದಯಾಘಾತದಿಂದ ಜಮೀನಿನಲ್ಲಿ ಮೃತಪಟ್ಟಿದ್ದ. ಅವರ ಮೆಚ್ವಿನ ಮೇಕೆ ಸಾಕಿದ ಯಜಮಾನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ಕಂಬನಿ ಮಿಡಿದಿದೆ. ಅಂತ್ಯಕ್ರಿಯೆಗಾಗಿ ಜನರ ಮಧ್ಯೆ ಗ್ರಾಮದಿಂದ ಒಂದೂವರೆ ಕಿ.ಮೀ ದೂರದ ಸ್ಮಶಾನಕ್ಕೆ ಬಂದ ಮೇಕೆ ಯಜಮಾನನ ಅಂತ್ಯಕ್ರಿಯೆ ಮುಗಿಯುವಚರೆಗೂ ಸ್ಥಳ ಬಿಟ್ಟು ಕದಲಲಿಲ್ಲ.
Advertisement
Advertisement
ಎಲ್ಲಿಗೆ ಹೋದರೂ ಇದು ಅಮರಪ್ಪ ಅವರ ಜೊತೆಯಲ್ಲಿರುತ್ತಿತ್ತು. ಅಂತ್ಯ ಕ್ರಿಯೆಯ ವೇಳೆಯೂ ಯಜಮಾನನ್ನು ಹಿಂಬಾಲಿಸಿಕೊಂಡೇ ಬಂದಿತ್ತು. ಮೇಕೆಯ ವರ್ತನೆ ಕಂಡು ಜನ ಅಚ್ಚರಿಗೊಂಡಿದ್ದಾರೆ. ಶವಸಂಸ್ಕಾರ ಮುಗಿದ ಬಳಿಕ ಜನರೊಂದಿಗೆ ಮೇಕೆ ಗ್ರಾಮಕ್ಕೆ ಮರಳಿದೆ. ದ್ಯಾವಮ್ಮ ಜಾತ್ರೆಗಾಗಿ ಮೇಕೆಯನ್ನ ಮನೆಯಲ್ಲಿ ಬೆಳೆಸಲಾಗಿದೆ.