ರಾಯಚೂರು: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಭತ್ತದ ಹೊಟ್ಟು ತುಂಬಿದ್ದ ಲಾರಿ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ಹಾಗೂ ಹೋಟೆಲ್ (Hotel) ಮೇಲೆ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಜಖಂ ಆಗಿವೆ.
ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓವರ್ ಲೋಡ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?
ರಾಯಚೂರಿನಿಂದ ಹೈದ್ರಾಬಾದ್ ಕಡೆಗೆ ಹೊರಟಿದ್ದ ಲಾರಿ ಪಲ್ಟಿಯಿಂದ ಹೋಟೆಲ್, ಫಾಸ್ಟ್ ಪುಡ್ ಸೆಂಟರ್ ಜಖಂ ಆಗಿವೆ. ಶೆಡ್, ಪೀಠೋಪಕರಣ ಸೇರಿ ಹೋಟೆಲ್‌ನಲ್ಲಿದ್ದ ವಸ್ತುಗಳೆಲ್ಲಾ ಹಾನಿಯಾಗಿವೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ?
ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಾರಿ ಓವರ್ ಲೋಡ್ ತುಂಬಿಕೊಂಡು ವೇಗವಾಗಿ ಬಂದಿದ್ದೇ ಘಟನೆಗೆ ಕಾರಣ ಅಂತ ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟನಲ್ ರೋಡ್‌ಗೆ ಬಿಜೆಪಿ ವಿರೋಧ – ಸಂಸದರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ