ರಾಯಚೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಅಬಕಾರಿ ಇಲಾಖೆ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ 5 ಕಂಟ್ರೋಲ್ ರೂಂ.ಗಳಲ್ಲಿ ಒಟ್ಟು 177 ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆ ಅಬಕಾರಿ ಇಲಾಖೆ, ಅಕ್ರಮ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದೆ. ಚಿಲ್ಲರೆಗೆ ಮದ್ಯ ಕೊಡುವುದು, ಎಂಆರ್‍ಪಿ ಗಿಂತ ಹೆಚ್ಚು ಬೆಲೆ ಹಾಗೂ ಬಿಲ್ ಕೊಡದ 37 ಮದ್ಯದಂಗಡಿಗಳ ಪರವಾನಿಗೆಯನ್ನ ಅಮಾನತು ಮಾಡಲಾಗಿದೆ.
Advertisement
Advertisement
ಇನ್ನೂ ಇದುವರೆಗೆ ಅಕ್ರಮ ಸಾಗಣೆ ಮಾಡುತ್ತಿದ್ದ 1600 ಲೀಟರ್ ಮದ್ಯ, 193 ಲೀಟರ್ ಬೀಯರ್, 769 ಲೀಟರ್ ಕಲಬೆರಿಕೆ ಸೇಂದಿ, 10 ಲೀಟರ್ ಕಳ್ಳಭಟ್ಟಿ ಹೆಂಡವನ್ನ ಜಪ್ತಿ ಮಾಡಲಾಗಿದೆ. ದಾಳಿ ವೇಳೆ ಒಟ್ಟು 22 ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ವಾಹನ ಸೇರಿದಂದ 18 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಬಕಾರಿ ಉಪ ಆಯುಕ್ತ ಪ್ರಶಾಂತ್ ಕುಮಾರ್ ಹೇಳಿದ್ದಾರೆ.