ರಾಯಚೂರು: ತೀವ್ರ ಪೈಪೋಟಿ ನಡುವೆ ರಾಯಚೂರು (Raichur) ಲೋಕಸಭಾ ಬಿಜೆಪಿ (BJP) ಟಿಕೆಟ್ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ (Raja Amareshwara Naik) ಒಲಿದಿದೆ.
ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಂಸದ ಬಿ.ವಿ.ನಾಯಕ್, ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹಾಗೂ ರಾಜಾ ಅಮರೇಶ್ವರ ನಾಯಕ್ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಬಿಜೆಪಿ ಹೈಕಮಾಂಡ್ ಕೊನೆಗೆ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್‌ಗೆ ಟಿಕೆಟ್ ಘೋಷಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಶೆಟ್ಟರ್, ಚಿಕ್ಕಬಳ್ಳಾಪುರ ಸುಧಾಕರ್, ಉತ್ತರ ಕನ್ನಡದಲ್ಲಿ ಕಾಗೇರಿ ಸ್ಪರ್ಧೆ- BJP 5ನೇ ಪಟ್ಟಿ ರಿಲೀಸ್
Advertisement
ಲಿಂಗಸುಗೂರಿನ ಗುಂತಗೋಳ ಸಂಸ್ಥಾನದ ರಾಜ ಮನೆತನದವರಾದ ರಾಜಾ ಅಮರೇಶ್ವರ ನಾಯಕ್ BA, LLB ಪದವೀಧರರಾಗಿದ್ದಾರೆ. ಎರಡು ಬಾರಿ ಶಾಸಕರಾಗಿದ್ದು, ಎರಡು ಬಾರಿಯೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಒಂದು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕೈಗಾರಿಕೋದ್ಯಮಿ, ಕಾಂಗ್ರೆಸ್ ಮಾಜಿ ಸಂಸದ ನವೀನ್ ಜಿಂದಾಲ್ ಬಿಜೆಪಿಗೆ ಸೇರ್ಪಡೆ
Advertisement
Advertisement
1989ರಲ್ಲಿ ಬಂಗಾರಪ್ಪ ಸಿಎಂ ಆಗಿದ್ದ ವೇಳೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಧಾರ್ಮಿಕ ದತ್ತಿ ಸಚಿವರಾಗಿದ್ದರು. 1999 ರಲ್ಲಿ ಎಸ್‌ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಲ್ಮಲಾ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿಖಾನೆ ರಾಜ್ಯ ಸಚಿವರಾಗಿದ್ದರು. 2019ರಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಬಿವಿ ನಾಯಕ್ ವಿರುದ್ಧ ಜಯಗಳಿಸಿದ್ದರು. 1993ರಲ್ಲಿ ರಾಜ್ಯ ವಿಧಾನಸಭೆಯ ಎಸ್‌ಸಿ, ಎಸ್‌ಟಿ ಶಾಸಕಾಂಗ ಸಮಿತಿ ಅಧ್ಯಕ್ಷರಾಗಿದ್ದರು. 1999ರಲ್ಲಿ ಕರ್ನಾಟಕ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಅಮರೇಶ್ವರ ನಾಯಕ್ ಕಾರ್ಯನಿರ್ವಹಿಸಿದ್ದಾರೆ. ಇದನ್ನೂ ಓದಿ: ಪಾಕ್ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ ವಿಲೀನ ಆಗುತ್ತೆ: ರಾಜನಾಥ್ ಸಿಂಗ್ ಭರವಸೆ
Advertisement