ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಕೊರೊನಾ ಕುರಿತು ಹಾಡನ್ನು ಹಾಡಿದ್ದಾರೆ.
ಕಾಣದ ಕಡಲಿಗೆ ಹಾಡಿನ ದಾಟಿಯಲ್ಲಿ ಕೊರೊನಾ ವಿಷಯದ ಬಗ್ಗೆ ಸ್ವತಃ ತಾವೇ ಬರೆದ ಹಾಡನ್ನು ಹಾಡಿದರು. ಕಾಣದ ಕ್ರಿಮಿಗೆ ಹೆದರಿದೆ ಜನ, ರಕ್ಷಿಸಿಕೊಳ್ಳಬಹುದು ನಮ್ಮನ್ನ ಎಂದು ಪ್ರಧಾನ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಹಾಡಿದರು.
Advertisement
Advertisement
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಮಲ್ಲಿಕಾರ್ಜುನ ಗೌಡ, ಉಚ್ಚ ನ್ಯಾಯಾಲಯದ ಆದೇಶದಂತೆ ಕೋರ್ಟ್‍ನಲ್ಲಿ ಕೆಲವು ನಿಯಮಗಳನ್ನು ಜಾರಿಗೆ ತಂದಿರುವುದಾಗಿ ಹೇಳಿದರು. ಇದನ್ನೂ ಓದಿ: ಮಹಿಳೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್
Advertisement
Advertisement
ಜನರ ರಕ್ಷಣೆಗೆ ಸಾಕ್ಷಿ ಪಡೆಯೋದನ್ನು ತಡೆಹಿಡಿಯಲಾಗಿದೆ. ತುರ್ತು ಕೇಸ್‍ಗಳಷ್ಟೇ ವಿಚಾರಣೆ ಮಾಡಲಾಗುವುದು. ಕೊರೊನಾ ಅತಿ ವೇಗವಾಗಿ ಹರಡುತ್ತಿದೆ. ಇದರಿಂದಾಗಿ ಅದರ ಜೊತೆ ಸೆಣಸಾಡೋದು ಬೇಡ. ನಾವೇ ಅದರಿಂದ ದೂರ ಉಳಿದುಬಿಡೋಣ ಎಂದರು. ಇದನ್ನೂ ಓದಿ: ಕಾಮಗಾರಿಗಳ ಗುಣಮಟ್ಟ ಕಾಪಾಡುವುದು ಗುತ್ತಿಗೆದಾರರ ಆದ್ಯ ಕರ್ತವ್ಯ: ಕೆ.ಗೋಪಾಲಯ್ಯ
ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಔಷಧಿ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್‍ಗೆ ಸಿದ್ಧರಿರಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಎಸ್‍ಪಿ ಅವರಿಗೂ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದು ಮಾಹಿತಿಯನ್ನು ನೀಡಿದರು.