ರಾಯಚೂರು: ಕಳಪೆ ಐಸ್‍ಕ್ರೀಂ ಸೇವಿಸಿ ರಾಯಚೂರು ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿ ಆರು ಮಕ್ಕಳು ಅಸ್ವಸ್ಥರಾಗಿದ್ದಾರೆ.
ತೆಲಂಗಾಣದ ಜುಲೈಕಲ್ ಗ್ರಾಮದ ಆಂಜನೇಯ ಬೈಕ್‍ನಲ್ಲಿ ಐಸ್‍ಕ್ರೀಂ ಮಾರಾಟಕ್ಕಾಗಿ ಸಿಂಗನೋಡಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಐಸ್‍ಕ್ರೀಂ ತಿಂದ ಮೀನಾಕ್ಷಿ, ವೆನ್ನೆಲ್ಲಾ, ಶ್ರಾವಣಿ, ಅಕ್ಷತಾ, ಶಿವಕುಮಾರ್ ಹಾಗೂ ಶ್ರಾವಣಿ ಅಸ್ವಸ್ಥರಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Advertisement
Advertisement
ಆಂಜನೇಯ ಮ್ಯಾಂಗೋ ಬಾರ್ ಹೆಸರಿನ ಕಳೆಪ ಹಾಗೂ ಎಕ್ಸ್ ಪೈರಿ ದಿನಾಂಕ ಇಲ್ಲದ ಐಸ್‍ಕ್ರೀಂಗಳನ್ನು ತಂದಿದ್ದ. ಆದರೆ ಇದನ್ನು ಅರಿಯ ಮಕ್ಕಳು ಐಸ್‍ಕ್ರೀಂ ಬಾರ್ ಗಳನ್ನು ಖರೀದಿಸಿ ತಿಂದಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಮೂರ್ಛೆ ಹೊಗಿದ್ದಾರೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಐಸ್‍ಕ್ರೀಂ ಮಾರಾಟ ಮಾಡಿದ ಆಂಜನೇಯನನ್ನು ಗ್ರಾಮಸ್ಥರು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆತನನ್ನು ಯಾಪಲದಿನ್ನಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.