– ರೈತರಿಗೆ ಸಂತಸ ತಂದ ಬೆಲೆ ಏರಿಕೆ
ರಾಯಚೂರು: ಯಾವುದಾದ್ರೂ ಒಂದು ವಸ್ತುಗೆ ಇಷ್ಟೇ ಬೆಲೆ ಅಂತ ಕಟ್ಟಲು ಸಾಧ್ಯವೇ ಇಲ್ಲ ಎನ್ನುವುದಾದರೆ ಅದು ಈರುಳ್ಳಿಗೆ ಮಾತ್ರ ಅನಿಸುತ್ತದೆ. ಯಾಕೆ ಅಂದ್ರೆ ಕೆಲವು ಬಾರಿ ರೈತರ ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ಕೆಲವೊಮ್ಮೆ ಆನಂದ ಭಾಷ್ಪವನ್ನು ಸುರಿಸುತ್ತದೆ. ಈಗಂತೂ ರಾಯಚೂರಿನಲ್ಲಿ ಈರುಳ್ಳಿ ಬೆಲೆ ಏರಿಕೆ ಆಗುತ್ತಿದ್ದು, ಹೋಟೆಲ್, ಕ್ಯಾಂಟಿನ್‍ಗಳಲ್ಲಿ ಈರುಳ್ಳಿ ಕೇಳಲೇಬೇಡಿ ಅಂತ ಬೋರ್ಡ್ ಹಾಕಿಕೊಂಡಿದ್ದಾರೆ.
ಮೊನ್ನೆಯಷ್ಟೇ ಕುಸಿದಿದ್ದ ಈರುಳ್ಳಿ ಬೆಲೆ ಈಗ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕ್ವಿಂಟಾಲ್‍ಗೆ 6 ಸಾವಿರ ರೂ.ದಿಂದ 8 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ತರಕಾರಿ ಮಾರುಕಟ್ಟೆಯಲ್ಲಿ 70 ರಿಂದ 90 ರೂಪಾಯಿಗೆ ಕೆ.ಜಿ ಈರುಳ್ಳಿ ಸಿಗುತ್ತಿದೆ. ದುಬಾರಿ ಈರುಳ್ಳಿಯನ್ನ ಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ. ಹೋಟೇಲ್, ಕ್ಯಾಂಟಿನ್‍ಗಳಲ್ಲಂತೂ ಅಡುಗೆಗೆ ಈರುಳ್ಳಿ ಬಳಸುವುದನ್ನ ಕಡಿಮೆ ಮಾಡಿದ್ದಾರೆ. ಊಟದ ಜೊತೆ ಈರುಳ್ಳಿ ಕೇಳಬೇಡಿ ಅಂತ ಬೋರ್ಡ್ ಗಳನ್ನೇ ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ಖದೀಮರ ಈರುಳ್ಳಿ ಮೋಹ- ಪೆಟ್ಟಿಗೆ ತುಂಬಾ ಹಣವಿದ್ದರೂ ಕದ್ದಿದ್ದು ಈರುಳ್ಳಿ ಮಾತ್ರ
Advertisement
Advertisement
ನಾರ್ಥ್ ಇಂಡಿಯನ್ ಊಟದ ಜೊತೆ ಈರುಳ್ಳಿ ಇದ್ದೇ ಇರುತ್ತದೆ. ಬೆಲೆ ಏರಿಕೆಯಿಂದಾಗಿ ಹೋಟೆಲ್‍ಗಳಲ್ಲಿ ಈರುಳ್ಳಿ ಅಪರೂಪದ ವಸ್ತುವಾಗಿದೆ. ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಊಟದ ದರವೂ ಹೆಚ್ಚು ಮಾಡಬೇಕಾಗುತ್ತದೆ. ಒಂದು ವೇಳೆ ಊಟದ ದರ ಹೆಚ್ಚಿಸಿದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಹೀಗಾಗಿ ಈರುಳ್ಳಿ ಬಳಕೆಯನ್ನೇ ಕಡಿಮೆ ಮಾಡಬೇಕಾದ ಪರಸ್ಥಿತಿಯಿದೆ ಎಂದು ರಾಯಚೂರಿನ ಶಕ್ತಿನಗರದ ಕ್ಯಾಂಟಿನ್ ಮಾಲೀಕ ಅಜರುದ್ದೀನ್ ಹೇಳಿದ್ದಾರೆ. ಇದನ್ನೂ ಓದಿ: 1 ಕೆಜಿ ಈರುಳ್ಳಿಗಾಗಿ ಶಾಪಿಂಗ್ ಮಾಲ್‌ನಲ್ಲಿ ಗ್ರಾಹಕರು, ಸಿಬ್ಬಂದಿ ಫೈಟಿಂಗ್
Advertisement
ಮಹಾರಾಷ್ಟ್ರ ಸೇರಿದಂತೆ ರಾಜ್ಯದಲ್ಲೂ ಎಲ್ಲೆಡೆ ಸುರಿದ ಭಾರೀ ಮಳೆಯೆ ಈರುಳ್ಳಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈರುಳ್ಳಿ ಬೆಳೆದು, ಬೆಳೆಯನ್ನು ರಕ್ಷಿಸಿಕೊಂಡ ರೈತರಿಗೆ ಈಗ ಬಂಪರ್ ಬೆಲೆ ಸಿಗುತ್ತಿದೆ. ಅದೆಷ್ಟೋ ವರ್ಷಗಳಿಂದ ರೈತರು ಈ ಬೆಲೆಯನ್ನು ಕಂಡಿರಲಿಲ್ಲ. ಇದೇ ಬೆಲೆ ಮುಂದುವರಿಯಬೇಕು ಎನ್ನುವುದು ರೈತರು ಅಭಿಪ್ರಾಯಪಟ್ಟಿದ್ದಾರೆ.