ವಿಧಾನಪರಿಷತ್ ಚುನಾವಣೆ ಮತದಾನಕ್ಕೆ ಅಂತಿಮ ಸಿದ್ಧತೆ- ಮತಗಟ್ಟೆ ಬಳಿ ಬಿಗಿ ಭದ್ರತೆ

Public TV
1 Min Read
RAICHUR 1

ರಾಯಚೂರು: ಸೋಮವಾರ ನಡೆಯಲಿರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ರಾಯಚೂರು (Raichur) ಜಿಲ್ಲಾಡಳಿತ ಅಂತಿಮ ಸಿದ್ದತೆ ನಡೆಸಿದೆ. ಈಗಾಗಲೇ ಚುನಾವಣಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದ್ದು, ಮತದಾನ ಸಲಕರಣೆಗಳನ್ನ ಸಿಬ್ಬಂದಿಗೆ ವಿತರಿಸಲಾಗಿದೆ.

RAICHUR

ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ರಾಯಚೂರು ಜಿಲ್ಲೆಯಾದ್ಯಂತ 30 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಸಿಂಧನೂರಿನಲ್ಲಿ ಒಂದು ಹೆಚ್ಚುವರಿ ಆಕ್ಸಿಲರಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. 30 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ 7 ಮತಗಟ್ಟೆಗಳಲ್ಲಿ ವೀಡಿಯೋಗ್ರಫಿ ವ್ಯವಸ್ಥೆ ಮಾಡಲಾಗಿದೆ. ಮತದಾನಕ್ಕಾಗಿ 41ಪಿಆರ್ ಒ, 41 ಎಆರ್ ಒ ಹಾಗೂ 82 ಪಿಒ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಜಿಲ್ಲೆಯಾದ್ಯಂತ ಒಟ್ಟು 20 ಸಾವಿರದ 317 ಮತದಾರರು ನೋಂದಣಿ ಮಾಡಿಕೊಂಡಿದ್ದು, ನಾಳೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಭದ್ರತೆಗೆ 645 ಪೊಲೀಸ್ ಸಿಬ್ಬಂದಿ, 3 ಕೆಎಸ್‌ಆರ್‌ಪಿ ತುಕಡಿ, 1 ಸಿಎಪಿಎಫ್ ತುಕಡಿ, 10 ಡಿಎಆರ್ ತುಕಡಿ ಸೇರಿದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇದನ್ನೂ ಓದಿ: ಇದು ಎಕ್ಸಿಟ್‌ ಪೋಲ್‌ ಅಲ್ಲ, ಮೋದಿ ಫ್ಯಾಂಟಸಿ ಪೋಲ್‌ – ʻಇಂಡಿಯಾʼ ಒಕ್ಕೂಟಕ್ಕೆ 295 ಸೀಟ್‌ ಪಕ್ಕಾ: ರಾಗಾ ವಿಶ್ವಾಸ

Share This Article