– ಟ್ರಕ್‍ನಲ್ಲಿದ್ದ 30 ಜನರಲ್ಲಿ 6 ಜನರಿಗೆ ಗಂಭೀರ ಗಾಯ
ರಾಯಚೂರು: ಲಾರಿ ಹಾಗೂ ಕೂಲಿ ಕಾರ್ಮಿಕರಿದ್ದ ಮಿನಿ ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ 5 ಜನ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತೆಲಂಗಾಣದ ಶಂಶಾಬಾದ್ ಬಳಿ ಘಟನೆ ನಡೆದಿದೆ.
ಘಟನೆಯಲ್ಲಿ ಮೂವರು ಮಹಿಳೆಯರು, ಬಾಲಕಿ, ಬಾಲಕ ಸೇರಿ ಒಟ್ಟು ಐವರು ಮೃತಪಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಶಂಶಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಚಾಲಕ ನಿರ್ಲಕ್ಷದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
Advertisement
5 persons died&6 injured after collision between lorry & mini truck in Shamshabad,Telangana. Mini-truck was carrying 30 people who were going to Raichur,Karnataka amid #CoronavirusLockdown. Injured shifted to hospital: R Venkatesh,Circle Inspector,Shamshabad Rural Police Station. pic.twitter.com/XWmOSV86gW
— ANI (@ANI) March 27, 2020
Advertisement
ಕೊರೊನಾ ವೈರಸ್‍ನಿಂದ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದ್ದು, ರಾಯಚೂರಿನ ರಸ್ತೆ ನಿರ್ಮಾಣ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಸೂರ್ಯಪೇಟೆಯಿಂದ 30 ಜನರು ತಮ್ಮ ಗ್ರಾಮಗಳಿಗೆ KA 36 B 8264 ನಂಬರಿನ ಮಿನಿ ಟ್ರಕ್‍ನಲ್ಲಿ ಸಾಗಿಸುತ್ತಿದ್ದರು. ಶಂಶಾಬಾದ್ ಬಳಿ ವೇಗವಾಗಿ ಬಂದ GJ 06 BT 0823 ನಂಬರಿನ ಲಾರಿ ಚಾಲಕ ನಿಯಂತ್ರಣ ತಪ್ಪಿ ಹಿಂಬದಿಯಿಂದ ಮಿನಿ ಟ್ರಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಐವರು ಸ್ಥಳದಲ್ಲಿ ಪ್ರಾಣಬಿಟ್ಟಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್‍ಆರ್.ವೆಂಕಟೇಶ್ ಅವರು ಪರಿಶೀಲನೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.
Advertisement
Those travelling in the mini-truck were road construction workers/labourers and were going back to their homes in Raichur District of Karnataka, from Suryapet in Telangana: R Venkatesh, Circle Inspector, Shamshabad Rural Police Station. https://t.co/heQkMt1PgU
— ANI (@ANI) March 27, 2020