– ಡೆಂಗ್ಯೂ ಹಾಟ್ ಸ್ಪಾಟ್ ಆಗಿರುವ ಮಾನ್ವಿ ಪಟ್ಟಣ
ರಾಯಚೂರು: ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶಂಕಿತ ಡೆಂಗ್ಯೂಗೆ ಓರ್ವ ಯುವಕ ಬಲಿಯಾಗಿದ್ದಾನೆ. ಪಟ್ಟಣದ ಜೈಭೀಮ ನಗರದ ಯುವಕ ನವೀನ್ ಕುಮಾರ್ (18) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮಾನ್ವಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ 5 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ನವೀನ್‍ಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲೂ ಸರಿಯಾದ ಚಿಕಿತ್ಸೆ ಸಿಕ್ಕಿಲ್ಲ, ಪುನಃ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲೂ ಸರಿಯಾದ ಚಿಕಿತ್ಸೆ ಸಿಗದೆ ಶಂಕಿತ ಡೆಂಗ್ಯೂಗೆ ಯುವಕ ಬಲಿಯಾಗಿದ್ದಾನೆ.
Advertisement
Advertisement
ಡ್ಯಾನ್ಸರ್ ಆಗಬೇಕೆಂದು ಕನಸು ಕಂಡಿದ್ದ ಪಿಯು ವಿದ್ಯಾರ್ಥಿ ನವೀನ್ ಓದಿನಲ್ಲೂ ಚುರುಕಿದ್ದ, ಯುವಕ ನವೀನ್ ಕುಮಾರ್ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಇನ್ನೂ ಮಾನ್ವಿ ತಾಲೂಕು ಒಂದರಲ್ಲೇ ಕಳೆದ 21 ದಿನಗಳಲ್ಲಿ 1,474 ಜನರ ರ್ಯಾಪಿಡ್ ಡೆಂಗ್ಯೂ ಪರೀಕ್ಷೆ ಮಾಡಲಾಗಿತ್ತು. ಇದರಲ್ಲಿ 151 ಡೆಂಗ್ಯೂ ಪ್ರಕರಣ ದಾಖಲಾಗಿವೆ. ಇದನ್ನೂ ಓದಿ: ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್
Advertisement
ಇನ್ನೂ ಕಳೆದ ಎರಡು ತಿಂಗಳಿಂದ ಚಿಕ್ಕಮಕ್ಕಳನ್ನ ಬಾಧಿಸುತ್ತಿರುವ ವೈರಲ್ ಫೀವರ್ ಜಿಲ್ಲೆಯಲ್ಲಿ ಇನ್ನೂ ಮುಂದುವರಿದಿದೆ. ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.