ರಾಯಚೂರು: ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಚಂದ್ರಯಾನ-3 (Chandrayaan-3) ಯಶಸ್ವಿಯಾಗಲೆಂದು ರಾಯಚೂರಿನಲ್ಲಿ (Raichur) ಪುಟಾಣಿ ಮಕ್ಕಳು ವಿಶೇಷ ಪೂಜೆ (Speical Pooja), ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಮಕ್ಕಳು ಪ್ರಾರ್ಥಿಸಿದ್ದಾರೆ.
Advertisement
ನಗರದ NIG ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಪುಟಾಣಿ ಮಕ್ಕಳೇ ಪೂಜೆ ನೆರವೇರಿಸಿದ್ದಾರೆ. ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಶ್ಲೋಕಗಳನ್ನ ಹೇಳುತ್ತಾ ಇಸ್ರೋದ ಪ್ರಯತ್ನಕ್ಕೆ ಜಯ ಸಿಗಲಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಕ್ಕಳ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Chandrayaan-3ಕ್ಕೆ ಇಂದು ಕ್ಲೈಮ್ಯಾಕ್ಸ್; ಸಂಜೆ 6:04ಕ್ಕೆ ಸಾಫ್ಟ್ ಲ್ಯಾಂಡಿಂಗ್
Advertisement
Advertisement
ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 (Chandrayaan-3) ನೌಕೆಯ ವಿಕ್ರಮ್ ಲ್ಯಾಂಡರ್ (Vikram Lander) ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ. ಪ್ರಗ್ಯಾನ್ ರೋವರ್ (Pragyan Rover) ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6:04ರ ವೇಳೆಗೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ. ಇದನ್ನೂ ಓದಿ: ಟಾಟಾ ಸಮೂಹಕ್ಕೆ ಮಾಯಾ ಉತ್ತರಾಧಿಕಾರಿ – ಶೀಘ್ರದಲ್ಲೇ ಘೋಷಣೆ ಸಾಧ್ಯತೆ
Advertisement