ಬೆಂಗಳೂರು: ಕರ್ನಾಟಕದ ರಾಯಚೂರು ಜಿಲ್ಲೆ ಹಾಗೂ ಯಾದಗಿರಿ ಜಿಲ್ಲೆ ದೇಶದಲ್ಲಿಯೇ ಅತಿ ಹಿಂದುಳಿದ ಜಿಲ್ಲೆಗಳು ಅಂತ ಗುರುತಿಸಲಾಗಿದೆ. ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ಜಿ ಪುಟ್ಟಸ್ವಾಮಿ ಈ ಮಾಹಿತಿಯನ್ನ ಬಹಿರಂಗ ಪಡಿಸಿದ್ದಾರೆ.
ಮಹಾತ್ವಾಕಾಂಕ್ಷಿ ಜಿಲ್ಲೆಗಳು ಅಂತ ರಾಯಚೂರು ಹಾಗೂ ಯಾದಗಿರಿಯನ್ನು ಗುರುತಿಸಲಾಗಿದೆ. ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳು ರಾಯಚೂರು ಯಾದಗಿರಿ ಆಗಿದೆ. ಅಲ್ಲಿ ಅಭಿವೃದ್ಧಿಗೆ ಬೇರೆ ಬೇರೆ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
Advertisement
ಎರಡು ಜಿಲ್ಲೆಗಳ ಅಭಿವೃದ್ಧಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲು ಸಿಎಂಗೆ ಮನವಿ ಮಾಡಲು ಯೋಜನಾ ಮಂಡಳಿ ನಿರ್ಧರಿಸಿದೆ ಎಂದಿದ್ದಾರೆ. ಅಭಿವೃದ್ದಿ ಆದ್ಯತೆ ನೀಡುವಾಗ ಹಿಂದುಳಿದ ಈ ಎರಡು ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಿಎಂ ಯಡಿಯೂರಪ್ಪಗೆ ರಾಜ್ಯ ಯೋಜನಾ ಮಂಡಳಿ ಶಿಫಾರಸು ಮಾಡಿದೆ.