– ಅಮೂಲ್ಯಾ ಬುದ್ಧಿವಂತ ಹುಡುಗಿ
ರಾಯಚೂರು: ದೇಶದ್ರೋಹದ ಭಾಷಣ ಮಾಡಿ ಜೈಲುಪಾಲಾಗಿರುವ ಅಮೂಲ್ಯಾ ಲಿಯೋನ ಪರ ರಾಯಚೂರಿನ ಸಿಎಎ ವಿರೋಧಿ ಹೋರಾಟದ ಸಂಚಾಲಕ ಹಿರಿಯ ವಕೀಲ ಎಸ್.ಮಾರೆಪ್ಪ ವಿವಾದಾತ್ಮಕ ಹೇಳಿಕೆ ನೀಡಿ ಅಮೂಲ್ಯಳಾನ್ನು ಬೆಂಬಲಿಸಿದ್ದಾರೆ.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಹೋರಾಟ ಹಿನ್ನೆಲೆ ಶಿವರಾತ್ರಿ ಜಾಗರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಮಾರೆಪ್ಪ, ಆಕೆ ಎಲ್ಲಾ ದೇಶಗಳಿಗೆ ಜಿಂದಾಬಾದ್ ಹೇಳುತ್ತಿದ್ದಳು. ಆದರೆ ಹೇಳಲು ಬಿಡಲಿಲ್ಲ. ಎಲ್ಲಾ ದೇಶಗಳ ಬಗ್ಗೆ ಪ್ರೀತಿ ವ್ಯಕ್ತಪಡಿಸಲು ಮುಂದಾಗಿದ್ದಳು. ಅದಕ್ಕೆ ಕೊನೆಯಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಹೇಳಿದ್ದಾಳೆ ಎಂದು ಅಮೂಲ್ಯಾಳನ್ನು ಸಮರ್ಥಿಸಿಕೊಂಡರು. ಇದನ್ನು ಓದಿ: ಬೆಂಗ್ಳೂರಲ್ಲಿ ದೇಶದ್ರೋಹ ಘೋಷಣೆ ಪ್ರಕರಣ- ಪರಪ್ಪನ ಅಗ್ರಹಾರಕ್ಕೆ ಅಮೂಲ್ಯ ಶಿಫ್ಟ್
ಅಮೂಲ್ಯಾ ಹೇಳಿದ್ದರಲ್ಲಿ ತಪ್ಪಿಲ್ಲ ಅವಳಿಗೆ ಪೂರ್ಣವಾಗಿ ಮಾತನಾಡಲು ಬಿಡಬೇಕಿತ್ತು. ಅವಳ ಮಾತುಗಳಿಗೆ ನಮ್ಮ ಬೆಂಬಲಯಿದೆ. ಮಾತನಾಡಲು ಬಿಡದೆ ಕೇಸ್ ಹಾಕಿದ್ದಾರೆ. ಆಕೆ ಬುದ್ಧಿವಂತ ಹುಡುಗಿ, ವೇದಿಕೆಯಲ್ಲಿದ್ದ ಮುಸ್ಲಿಮರು ಏನು ಹೇಳುತ್ತಾಳೋ ಎಂದು ಹೆದರಿಕೊಂಡು ಮಾತನಾಡಲು ಅವಕಾಶ ಕೊಟ್ಟಿಲ್ಲ. ಅಮೂಲ್ಯಾ ದೇಶದ್ರೋಹಿ ಅಲ್ಲ ಎಂದರು. ಇದನ್ನು ಓದಿ: ಮಗಳು ಮಾಡಿದ್ದು ತಪ್ಪು, ಅವಳ ಕೈ-ಕಾಲು ಮುರಿಯಲಿ: ಅಮೂಲ್ಯ ತಂದೆ
ಇದೇ ವೇಳೆ ನಮಸ್ತೆ ಟ್ರಂಪ್ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ್ರೊಹ ಮಾಡಿದ್ದಾರೆ. ತಮ್ಮ ದೇಶದ್ರೋಹ ಮುಚ್ವಿಕೊಳ್ಳಲು ಮೋದಿ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದರು.