ಬೆಂಗಳೂರು: ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು ಎಂದು ಸದಾಶಿವನಗರ ಡಿಸಿಪಿ ಅನುಚೇತ್ ಹೇಳಿದ್ದಾರೆ.
Advertisement
ಆರ್ಮಿ ಸ್ಕೂಲ್ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಆತ್ಮಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ಅನುಚೇತ್, ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ 17 ವರ್ಷದ ಯುವಕ ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಇಂಡಿಯನ್ ಏರ್ ಫೋರ್ಸ್ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಆದರೆ ನಾವು ಈ ಕುರಿತು ಪ್ರಾಥಮಿಕ ತನಿಖೆ ನಂತರವೇ ಮಾಡದೇ ಏನನ್ನು ಹೇಳಲಾಗುತ್ತಿಲ್ಲ. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಒಂದು ಸಿಂಗಲ್ ಬುಲೆಟ್ ತಲೆಯ ಬಲಭಾಗದಿಂದ ನುಗಿ ಎಡಭಾಗದಿಂದ ಬಿದ್ದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್
Advertisement
Advertisement
ಪರಿಶೀಲಿಸಿದಾಗ ನಮಗೆ ಇಂಡಿಯನ್ ಫ್ಯಾಕ್ಟರಿ ಮೇಡ್ ಪಿಸ್ತೂಲ್ ಸಿಕ್ಕಿದೆ. ಆ ಪಿಸ್ತೂಲ್‍ಗೆ ರಾಹುಲ್ ತಂದೆಯ ಪರವಾನಗಿ ಇದೆ ಎಂದು ತಿಳಿದುಬಂದಿದೆ. ರಾಹುಲ್ ಸುಮಾರು ಬೆಳಗ್ಗೆ 3.30ಗೆ ಅವನ ಮನೆಯಿಂದ ಹೊರಟು ಈ ಕಡೆ ಬಂದಿದ್ದಾನೆ. ಗಂಗೆನಹಳ್ಳಿಯಲ್ಲಿ ಈತನ ಮನೆ ಇರುವುದು ತಿಳಿದುಬಂದಿದ್ದು, ತಂದೆ, ತಾಯಿ ಮತ್ತು ಅಕ್ಕನ ಜೊತೆ ಇದ್ದ ಎಂದು ತಿಳಿದುಬಂದಿದೆ. ಅವನು ಸ್ವಯಂ ಪ್ರೇರಣೆಯಿಂದ ಈ ಕೃತ್ಯ ಮಾಡಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ
Advertisement
ಯಾವ ಕಾರಣಕ್ಕೆ ಯುವಕ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿದಿಲ್ಲ. ಈಗ ನಾವು ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದೇವೆ. ನಂತರ ಈ ಘಟನೆಗೆ ಕಾರಣ ಏನು ಎಂಬುದು ಪೂರ್ಣ ವಿವರ ತಿಳಿಯುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ- ಸ್ಮರಣಿಕೆಗಳು ಸೆ.17ರಿಂದ ಇ-ಹರಾಜು
ರಾಹುಲ್ ತಂದೆ 2017ರಲ್ಲಿ ಆರ್ಮಿಯಿಂದ ನಿವೃತ್ತ ಹೊಂದುವ ಸಮಯದಲ್ಲಿ ಈ ಪಿಸ್ತೂಲ್ ನನ್ನು ತೆಗೆದುಕೊಂಡಿದ್ದಾರೆ. ಮನೆಯಲ್ಲಿ ಅಲ್ಮೆರಾದಲ್ಲಿ ಪಿಸ್ತೂಲ್ ಇಡುತ್ತಿದ್ದರೆಂದು ಅವರು ತಿಳಿಸಿದ್ದಾರೆ. ಅದು ಅಲ್ಲದೇ ಆತನಿಗೂ ಪಿಸ್ತೂಲ್ ಬಳಸುವುದು ತಿಳಿದಿತ್ತು. ಅದಕ್ಕಾಗಿ ತರಬೇತಿಯನ್ನು ತೆಗೆದುಕೊಂಡಿದ್ದ ಎಂದು ಯುವಕನ ಪೋಷಕರು ತಿಳಿಸಿದ್ದಾರೆ.
ಯುವಕ 3-30 ವರೆಗೂ ಓದಿಕೊಂಡು ನಂತರ ವಾಕಿಂಗ್ ಹೋಗುತ್ತಿದ್ದ ಎಂದು ಅವರ ಪೋಷಕರು ತಿಳಿಸಿದ್ದಾರೆ. ಅದೇ ರೀತಿ ಇಂದು ಅಲ್ಮೆರಾದಲ್ಲಿದ್ದ ಪಿಸ್ತೂಲ್‍ನನ್ನು ತೆಗೆದುಕೊಂಡು ಬಂದು ಈ ಕೃತ್ಯ ಮಾಡಿದ್ದಾನೆ ಎಂದು ತಿಳಿದುಬರುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿಗೆ ಸಕ್ಕರೆ ನಾಡಿನ ಸ್ಪೆಷಲ್ ಸಾಂಗ್ ಗಿಫ್ಟ್