ನವದೆಹಲಿ: ಲೋಕಸಭಾ ಸದಸ್ಯ (Lok Sabha Member) ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸಂಸದರ ಅಧಿಕೃತ ಮನೆ ಖಾಲಿ ಮಾಡುವಂತೆ ಸೂಚಿಸಿ ಸುತ್ತೋಲೆ ಹೊರಡಿಸಿದ್ದ ಲೋಕಸಭೆಯ ಕಾರ್ಯದರ್ಶಿ ಮೋಹಿತ್ ರಾಜನ್ ಅವರಿಗೆ ರಾಹುಲ್ ಗಾಂಧಿ (Rahul Gandhi) ಪ್ರತ್ಯುತ್ತರ ನೀಡಿ, ಪತ್ರ ಬರೆದಿದ್ದಾರೆ.
Advertisement
ವಾಸ್ತವ್ಯ ರದ್ದುಗೊಳಿಸುವ ಕುರಿತು ನಿಮ್ಮ ಪತ್ರಕ್ಕೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿರುವ ಅವರು, ನಾನು ಇಲ್ಲಿ ಸಂತೋಷದ ಸಮಯ ಕಳೆದಿದ್ದೇನೆ, ಅದರ ನೆನಪುಗಳಿವೆ. ಜನರ ಆದೇಶಕ್ಕೆ ಋಣಿಯಾಗಿರುವುದಾಗಿ ಹೇಳಿದ್ದಾರೆ. ನನ್ನ ಹಕ್ಕುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ನಾನು ಖಂಡಿತವಾಗಿಯೂ ನಿಮ್ಮ ಪತ್ರದಲ್ಲಿರುವ ವಿವರಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಸಾವರ್ಕರ್ ಅಲ್ಲ, ಕ್ಷಮೆ ಕೇಳುವುದಿಲ್ಲ: ಅನರ್ಹತೆ ಕುರಿತು ರಾಹುಲ್ ಗಾಂಧಿ
Advertisement
Advertisement
2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯವು 2 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ನಂತರ ರಾಹುಲ್ ಗಾಂಧಿ ಅವರನ್ನ ಲೋಕಸಭಾ ಸಂಸದರಾಗಿ ಅನರ್ಹಗೊಳಿಸಲಾಗಿದೆ. ಉನ್ನತ ನ್ಯಾಯಾಲಯವು ಅವರ ಅಪರಾಧ ಮತ್ತು ಶಿಕ್ಷೆಯನ್ನು ತಡೆಹಿಡಿಯದ ಹೊರತು ಕಾಂಗ್ರೆಸ್ ನಾಯಕ 8 ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ – ವಯನಾಡಿನಲ್ಲಿ ಬ್ಲ್ಯಾಕ್ ಡೇ ಆಚರಣೆ
Advertisement
After being disqualified from the Lok Sabha, now the Lok Sabha Housing Committee has given notice to Congress leader Rahul Gandhi to vacate the government-allotted bungalow: Sources
(file photo) pic.twitter.com/noZHOFsVt0
— ANI (@ANI) March 27, 2023
ನಿಯಮಗಳ ಪ್ರಕಾರ, ಅವರು ಅನರ್ಹಗೊಂಡ ಆದೇಶದ ದಿನಾಂಕದಿಂದ (ಮಾರ್ಚ್ 24) ಒಂದು ತಿಂಗಳೊಳಗೆ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭೆಯ ವಸತಿ ಸಮಿತಿಯು ಏಪ್ರಿಲ್ 22ರೊಳಗೆ ಲುಟ್ಯೆನ್ಸ್ ದೆಹಲಿಯಲ್ಲಿ ಸರ್ಕಾರ ಮಂಜೂರು ಮಾಡಿದ ಬಂಗಲೆಯನ್ನು ಖಾಲಿ ಮಾಡುವಂತೆ ಪತ್ರ ಬರೆದಿತ್ತು. 2004ರಲ್ಲಿ ಲೋಕಸಭೆ ಸಂಸದರಾಗಿ ಆಯ್ಕೆಯಾದ ಬಳಿಕ ತುಘಲಕ್ ಲೇನ್‌ನಲ್ಲಿರುವ (Tughlaq Lane) ಬಂಗಲೆಯನ್ನು ರಾಹುಲ್ ಗಾಂಧಿ ಅವರಿಗೆ ಮಂಜೂರು ಮಾಡಲಾಗಿತ್ತು.