ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು

Public TV
3 Min Read
FotoJet 7 6

– ರಸ್ತೆಯಲ್ಲಿ ಕಣ್ಣೀರಿಟ್ಟ ಪೋಷಕರು
– ರಕ್ಷಾ ಬಂಧನದಂದು ನಾನು ಯಾರಿಗೆ ರಾಖಿ ಕಟ್ಟಲಿ?

ಬೆಂಗಳೂರು: ಅಯ್ಯೋ ಮಗನೇ, ಆ ದೇವರು ನಿನ್ನ ಬದಲು ನನ್ನನ್ನು ಕರೆದುಕೊಳ್ಳಬೇಕಿತ್ತು ಎಂದು ಹೇಳಿ ಮೃತ ರಾಹುಲ್ ಪೋಷಕರು ಕಣ್ಣೀರಿಟ್ಟರೆ ಸಹೋದರಿ ರಕ್ಷಾ ಬಂಧನದ ದಿನ ನಾನು ಯಾರಿಗೆ ರಾಖಿ ಕಟ್ಟಲಿ ಎಂದು ಹೇಳಿ ದು:ಖ ತೋಡಿಕೊಂಡಿದ್ದಾರೆ.

FotoJet 6 5
17 ವರ್ಷದ ವಿದ್ಯಾರ್ಥಿ ರಾಹುಲ್ ಇಂದು ಬೆಳಗ್ಗೆ ಸದಾಶಿವನಗರ ವ್ಯಾಪ್ತಿಯಲ್ಲಿ ಪಿಸ್ತೂಲಿನಿಂದ ಗುಂಡು ಹರಿಸಿಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಈ ಸುದ್ದಿ ತಿಳಿದ ತಕ್ಷಣ ಭಗತ್ ಸಿಂಗ್, ಬಾಬ್ನಾ ದಂಪತಿ ಸ್ಥಳಕ್ಕೆ ಆಗಮಿಸಿ ಕಣ್ಣೀರಿಟ್ಟಿದ್ದಾರೆ.

FotoJet 4 6

ರಾಹುಲ್ ತಂದೆ ಮಧ್ಯ ರಸ್ತೆಯಲ್ಲಿ ಕುಳಿತುಕೊಂಡು ಫೋನ್ ನಲ್ಲಿ ತನ್ನ ಮಗನ ಫೋಟೋವನ್ನು ನೋಡಿಕೊಂಡು ‘ನನ್ನ ಮಗ, ಅಯ್ಯೋ ನನ್ನ ಮಗ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಈ ವೇಳೆ ಅಲ್ಲಿದ್ದ ಪೊಲೀಸರು ಸಮಾಧಾನ ಮಾಡಿ ರಸ್ತೆಬದಿಗೆ ಕರೆದುಕೊಂಡುಹೋಗಿ ಕೂರಿಸಿದ್ದಾರೆ. ಈ ವೇಳೆ ತಂದೆಯವರೆಗೆ ಎದ್ದು ನಿಲ್ಲಲು ಸಹ ಶಕ್ತಿ ಇರಲಿಲ್ಲ. ಇದನ್ನೂ ಓದಿ:  ರಾಹುಲ್‍ಗೆ ಪಿಸ್ತೂಲ್ ಬಳಸಲು ತರಬೇತಿಯನ್ನು ನೀಡಲಾಗಿತ್ತು: ಡಿಸಿಪಿ ಅನುಚೇತ್

FotoJet 2 9

ಭಗತ್ ಸಿಂಗ್ ಮಾತನಾಡಿ, ನಾನು ಆರ್ಮಿಯಿಂದ ನಿವೃತ್ತಿಯನ್ನು ಪಡೆದಿದ್ದೇನೆ. ನಾವು ಎಂದೂ ಅವನಿಗೆ ಇದು ಮಾಡು ಇಷ್ಟು ಓದು ಎಂದು ಹೇಳಿಲ್ಲ. ಅವನಿಗೆ ಒಳ್ಳೆಯ ಕೆಲಸ ಸಿಕ್ಕಿ ಒಂದು ಕಡೆ ನೆಲೆ ನಿಂತರೆ ಸಾಕಾಗಿತ್ತು. ಆದರೆ ಈ ರೀತಿ ಮಾಡಿಕೊಳ್ಳುತ್ತಾನೆ ಎಂದು ನಾವು ಊಹಿಸಿರಲಿಲ್ಲ. ಅವನಿಗೆ ವ್ಯಾಯಾಮ ಮಾಡುವ ಅಭ್ಯಾಸವಿತ್ತು. ಯಾವುದೇ ರೀತಿಯ ತೊಂದರೆಗಳನ್ನು ನಾವು ಅವನಿಗೆ ಕೊಟ್ಟಿರಲಿಲ್ಲ. ಈ ಕುರಿತು ಅವರ ಗೆಳಯರಿಂದ ಏನಾದರೂ ತಿಳಿಯಬಹುದೇ? ಏಕೆಂದರೆ ಸ್ನೇಹಿತರ ಜೊತೆ ಯಾವಾಗಲೂ ಮಾತನಾಡುತ್ತಿದ್ದ ಅವರಿಂದ ಏನಾದರೂ ಸುಳಿವು ಸಿಗಬಹುದು ಎಂದು ಹೇಳಿ ದು:ಖ ಹೊರಹಾಕಿದರು.

ರಾಹುಲ್ ತಾಯಿ ಬಾಬ್ನ, ತನ್ನ ಸಂಬಂಧಿಕರಿಗೆ ಕರೆ ಮಾಡಿ ನಡೆದಿದ್ದ ಪರಿಸ್ಥಿತಿಯನ್ನು ಹೇಳಿ ಗೋಳಾಡುತ್ತಿದ್ದರು. ಸಿಕ್ಕ ಪೊಲೀಸರಿಗೆಲ್ಲ ಅಣ್ಣ ಇವನನ್ನು ಯಾರು ಸಾಯಿಸಿದ್ದರೆ ಎಂದು ತಿಳಿಯಿತಾ ಎಂದು ಪ್ರಶ್ನೆ ಮಾಡುತ್ತಿದ್ದರು. ಅಯ್ಯೋ ದೇವರೇ ನಾನು ಏನು ಮಾಡಿದೆ ನಮಗೆ ಏಕೆ ಈ ರೀತಿಯ ಪರಿಸ್ಥಿತಿಯನ್ನು ಕೊಟ್ಟೆ ಎಂದು ದೇವರನ್ನು ಶಪಿಸುತ್ತ ಒಂದು ಕಡೆ ನಿಲ್ಲಲಾರದೇ ಕಣ್ಣೀರು ಹಾಕುತ್ತಿದ್ದರು. ಇದನ್ನೂ ಓದಿ:  ಮುಂದಿನ ದಿನಗಳಲ್ಲಿ ಕ್ಷೇತ್ರವಾರು ಶಾಸಕರ ಜೊತೆ ಸಭೆ ಮಾಡಿ ಲಸಿಕೆ ಅಭಿಯಾನ ಮಾಡ್ತೇವೆ: ಆರ್.ಅಶೋಕ್

FotoJet 3 7

ಕುಸಿದು ಬಿದ್ದ ಸಹೋದರಿ!

ರಾಹುಲ್ ಸಹೋದರಿ ಸಹ ಸ್ಥಳಕ್ಕೆ ಆಗಮಿಸಿದ್ದು, ವಿಷಯ ತಿಳಿದು ಅಲ್ಲೇ ಕುಸಿದ್ದಿದ್ದಾರೆ. ಅದು ತನ್ನ ತಮ್ಮನಾ. ಇಲ್ಲಾ ಅದು ಸಾಧ್ಯನೇ ಇಲ್ಲ ಎಂದು ಸತ್ಯವನ್ನು ಅರಗಿಸಿಕೊಳ್ಳಲು ಒದ್ದಾಡುತ್ತಿದ್ದರು.

FotoJet 1 11

ಪೋಷಕರು ಅದು ರಾಹುಲ್. ಅವನ ತಲೆಯಲ್ಲಿ ಏನಾದರೂ ಇತ್ತ ಏಕೆ ಈ ರೀತಿ ಮಾಡಿಕೊಂಡ ಎಂದು ಪೋಷಕರು ಆತನ ಅಕ್ಕನನ್ನು ಕೇಳುತ್ತಿದ್ದರು. ಆದರೆ ಇದರ ಪರಿವೇ ಇಲ್ಲದೆ ಆಕೆ ಮಾತ್ರ ತನ್ನ ತಮ್ಮ ಮೃತನಾದ ಸ್ಥಳವನ್ನು ದಿಟ್ಟಿಸುತ್ತ ನಿಂತಿದ್ದರು. ಇಲ್ಲ ಅವನಿಗೆ ಏನೂ ಆಗಿಲ್ಲ. ಅವನು ಚೆನ್ನಾಗಿಯೇ ಇದ್ದಾನೆ. ನಾನು ಇಲ್ಲಿಂದ ಎಲ್ಲಿಯೂ ಹೋಗಲ್ಲ. ಅವನು ನನ್ನ ತಮ್ಮ ಅವನಿಗೆ ಏನೂ ಆಗುವುದಿಲ್ಲ. ಅಮ್ಮ ಅವನು ಚೆನ್ನಾಗಿ ಇದ್ದ. ಈಗ ಏನಾಯಿತು ಎಂದು ಸತ್ಯವನ್ನು ಒಪ್ಪಿಕೊಳ್ಳಲಾದೆ ಒದ್ದಾಡುತ್ತಿದ್ದರು. ಅಮ್ಮ ರಕ್ಷಾಬಂಧನ ದಿನ ಯಾರಿಗೆ ರಾಖಿಯನ್ನು ಕಟ್ಟಲಿ ಎಂದು ಕೇಳಿ ತಾಯಿಯನ್ನು ಗಟ್ಟಿಯಾಗಿ ಅಪ್ಪಿಕೊಂಡು ಅಳುತ್ತಿದ್ದರು. ಇದನ್ನೂ ಓದಿ:  10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

ಉತ್ತರಾಖಂಡ್ ಮೂಲದ ಕುಟುಂಬ ಕಳೆದ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದಿತ್ತು. ತಂದೆ ಭಗತ್ ಸಿಂಗ್ ಹವಾಲ್ದಾರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *