ಬೆಂಗಳೂರು: ಟ್ವಿಟ್ಟರ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕನ್ನಡಿಗರು ಲೆಫ್ಟು ರೈಟು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರು ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಮೇಲೆ ಹಾಕಿದ್ದನ್ನು ವಿರೋಧಿಸಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಾಗ ಮೋದಿ ಸರ್ಕಾರದ ವಿರುದ್ಧ ಸೈಕಲ್ ತುಳಿದು ಪ್ರತಿಭಟನೆ ಮಾಡುವ ನೀವು ಈಗ ಕರ್ನಾಟಕಕ್ಕೆ ಬಂದು ಪ್ರತಿಭಟಿಸಿ ಎಂದು ಬರೆದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
Advertisement
ನಿಮ್ಮದೆ ಸಮ್ಮಿಶ್ರ ಸರ್ಕಾರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ವಿರುದ್ಧ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
Advertisement
https://twitter.com/RKDubey7878/status/1014802700792287232
Advertisement
ಪೆಟ್ರೋಲ್ ಮೇಲಿದ್ದ ಸೆಸ್ ಶೇ.30 ರಿಂದ ಶೇ.32 ಮತ್ತು ಡೀಸೆಲ್ ಸೆಸ್ ಪ್ರಸ್ತುತ ಶೇ.19ರಿಂದ 21ಕ್ಕೆ ಏರಿಗೆ ಮಾಡಲಾಗಿದೆ. ಸೆಸ್ ಏರಿಕೆಯಾದ ಪರಿಣಾಮ ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.14 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆ 1.12 ರೂ. ಏರಿಕೆಯಾಗಲಿದೆ.
Advertisement
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯನ್ನು ಖಂಡಿಸಿ ರಾಹುಲ್ ಗಾಂಧಿ ಕೋಲಾರದಲ್ಲಿ ಸೈಕಲ್ ತುಳಿಯುವ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಟ್ರೆಂಡ್ ಇದ್ದಾಗ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ತೈಲ ಬೆಲೆಯನ್ನು ಇಳಿಸಿ ಇಲ್ಲದೇ ಇದ್ದರೆ ದೇಶವ್ಯಾಪಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದರು.
ಬಜೆಟ್‌ನಲ್ಲಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಮುಂತಾದ ಅಗತ್ಯ ವಸ್ತುಗಳ ತೆರಿಗೆ ಹೆಚ್ಚಿಸಿ ಎಲ್ಲ ಭಾಗದ ಜನರಿಗೆ ಕುಮಾರಸ್ವಾಮಿಯವರು ಬರೆ ಎಳೆದಿದ್ದಾರೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡನ್ನು ಸಂಪೂರ್ಣ ಕಡೆಗಣಿಸಿದ್ದು, ತಾವು ಸಮಗ್ರ ಕರ್ನಾಟಕಕ್ಕೆ ಮುಖ್ಯಮಂತ್ರಿ ಎಂಬುದನ್ನು ಅವರು ಮರೆತಿದ್ದಾರೆ. pic.twitter.com/H1e3klvoeC
— B.S.Yediyurappa (@BSYBJP) July 5, 2018
Hello @RahulGandhi let's do a nation wide protest against HDK' government in Karnataka. #KarnatakaBudget pic.twitter.com/JUbNMQGCGK
— Suhag Patel (@Suhag_Patel) July 5, 2018
Dear @divyaspandana ಪೆಟ್ರೋಲ್ ಬೆಲೆ ಜಾಸ್ತಿ ಆಯ್ತು ಬೊಬ್ಬೆ ಹೊಡ್ಕೊಳ್ತಿದ್ರಲ್ಲ ಇವಾಗ ಯಾಕೆ ಬಾಯಿ ಮುಚ್ಕೊಂಡ್ ಕೂತಿರೋದು…….!!!!
ಕ್ಷಮಿಸಿ ನೆನಪಿರಲಿಲ್ಲ ಈ "ದೋಸ್ತಿ" ಸರ್ಕಾರದಲ್ಲಿ ನಿಮ್ಮ ಪಕ್ಷಕ್ಕೆ 3 ಕಾಸಿನ ಬೆಲೆ ಇಲ್ಲ ನೋಡಿ ..
ಕುಮಾರಣ್ಣ ಆಡಿದ್ದೆ ಮಾತು ಮಾಡಿದ್ದೆ ಶಾಸನ…! #ದೋಸ್ತಿ_ಬಜೆಟ್ pic.twitter.com/5GNhPJSdzc
— Preetham ಕರ್ಕೇರಾ (@Sand_Piper13) July 5, 2018
ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಳವಾದಗ ಕೇಂದ್ರದಕಡೆ ಪದೇ ಪದೇ ಬೆರಳು ಮಾಡಿ ತೋರಿಸುತ್ತಿದ್ದ ಈ ಅಪವಿತ್ರ ಮೈತ್ರಿ ಸರ್ಕಾರ.!
ಈಗ ರೈತರ ಅಲ್ಪ ಸಾಲ ಮನ್ನಾ ಮಾಡುವ ನೆಪದಲ್ಲಿ ಶ್ರೀಸಾಮಾನ್ಯರಿಗೆ ಗೂಟ ಹೊಡೆದಿದ್ದಾರೆ.! #ಪೆಟ್ರೋಲ್_ಡಿಸೇಲ್_ಬೆಲೆ_ಹೆಚ್ಚಳ#ವಿದ್ಯುತ್_ದರ_ಹೆಚ್ಚಳ#ಮುಲಾಜಿನ_ಬಡ್ಜೆಟ್@Jaggesh2 @ShobhaBJP @mepratap
— ಮೇಘರಾಜ್27 ???????? (@Megharaja27) July 5, 2018
https://twitter.com/Jaiku12/status/1014843204867198976
ಯಾರರಿ ಅದು ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಬಜೆಟ್ನಲ್ಲಿ ಎನು ಕೊಟ್ಟಿಲ್ಲಾ ಅಂತ ಹೆಳತಾ ಇರೊದು, ಪೆಟ್ರೋಲ್ ಡಿಸಲ ರೆಟು ಪುರ್ತಿ ಕರ್ನಾಟಕಲ್ಲಿ ಹೆಚ್ಚಿಗೆ ಮಾಡಿಲ್ವಾ.. ಹಾಗೆಲ್ಲಾ ಭೆದಭಾವ ಮಾಡೊರಲ್ಲಾ ನಮ್ಮ ಸುಟಕೆಸ ಸ್ವಾಮಿ#KarnatakaBudget#KarnatakaBudget2018
— Accidental clerk (@accidental_cmo) July 5, 2018
https://twitter.com/AkshayVandure1/status/1014797860523556864
ಹಾಲಿನ ದರದಲ್ಲಿ 2 ರೂ ಕಡಿತಗೊಳಿಸಿ ರೈತರಿಗೆ ಹೊಡೆತ ಕೊಟ್ಟರು,ವಿದ್ಯುತ್ ದರ ಎರಡುಬಾರಿ ಏರಿಕೆ ಮಾಡಿದರು,ಪೆಟ್ರೋಲ್ ದರ ಜಾಸ್ತಿ ಮಾಡಿ ಮಧ್ಯಮ ವರ್ಗದ ಜನರಿಗೆ ಹೊಡೆತ ಕೊಟ್ಟರು,ಅನ್ನಭಾಗ್ಯ ಯೋಜನೆಯಡಿಯಲ್ಲಿ 2 ಕೆಜಿ ಅಕ್ಕಿ ಕಡಿತಗೊಳಿಸಿ ಬಡವರಿಗೆ ಹೊಡತ ಕೊಟ್ಟರು,
ವಾಹನಗಳ ಬೆಲೆ ಏರಿಕೆ ಮಾಡಿದರೂ
ಇಷ್ಟೆಲ್ಲ ಮಾಡಿ ರೈತರ ಸಾಲಮನ್ನ ಮಾಡಬೇಕಿತ್ತಾ?
— ಶಕುಂತಲ / Shakunthala (@ShakunthalaHS) July 5, 2018