ಹಾಸನ: ರಾಹುಲ್‍ಗಾಂಧಿ ಅವರು, ಅವರ ಆರೋಗ್ಯದ ಪ್ರದರ್ಶನವನ್ನು ಮಾಡುತ್ತಿದ್ದು, ಅದು ಕೇವಲ ದೈಹಿಕ ಆರೋಗ್ಯ ಮಾತ್ರ. ಅವರ ಭಾರತ್ ಜೋಡೋ ಯಾತ್ರೆಯಿಂದ ಯಾವುದೇ ಲಾಭವಿಲ್ಲ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ.
Advertisement
ಹಾಸನಾಂಬೆ (Hassanambe) ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‍ಗಾಂಧಿ (Rahul Gandhi) ಅವರ ಆರೋಗ್ಯ ಪ್ರದರ್ಶನ ಮಾಡುತ್ತಿದ್ದಾರೆ, ಅದು ಕೇವಲ ದೈಹಿಕ ಆರೋಗ್ಯ ಮಾತ್ರ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi)ಅವರು ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಭಾರತಕ್ಕೆ ಹೊರ ದೇಶದಲ್ಲಿ ಗೌರವ ಸಿಗುವಂತೆ, ದೇಶದಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ದೀರ್ಘಾಯುಷ್ಯ ಶಕ್ತಿಯನ್ನು ಕೊಡಬೇಕು ಎಂದು ಆಶಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಶಿಸ್ತು ಮೀರಿದರೆ ದಂಡ, ಕೆಲಸದಿಂದ ವಜಾ – ಸರ್ಕಾರದಿಂದ ನಿಯಮ ಜಾರಿ
Advertisement
Advertisement
ನಂತರ, ಭಾರತ್ ಜೋಡೋ (Bharat Jodo Yatre) ಆಗಬೇಕಿರುವುದು ಭಾರತದ ಒಳಗೆ ಅಲ್ಲ, ಭಾರತ ಜೋಡೋ ಆಗಬೇಕಿರುವುದು ಪಾಕ್ ವಶಪಡಿಸಿಕೊಂಡಿರುವ ಕಾಶ್ಮೀರದಲ್ಲಿ (Kashmir), ಯಾವ ಪಾಕಿಸ್ತಾನಕ್ಕೆ (Pakistan) ಅವತ್ತಿನ ಕಾಂಗ್ರೆಸ್ ಸರ್ಕಾರದ (Congress) ಅವಧಿಯಲ್ಲಿ ಬಿಟ್ಟುಕೊಟ್ಟರು. ಕಾಂಗ್ರೆಸ್ ಈ ದೇಶದ ಆಡಳಿತ ನಡೆಸುವ ಸಂದರ್ಭದಲ್ಲಿ ಭಾರತದ ಒಂದು ಭಾಗ ಇವತ್ತು ಪಾಕ್ ಆಕ್ರಮಿತ ಕಾಶ್ಮೀರ ಆಗಿದೆ. ದೇಶದ ಬಹುಭಾಗ ಚೀನಾಕ್ಕೆ ಹೋಗಿದೆ, 1992 ರಲ್ಲಿ ಧೀಮ್‍ಥಾನವನ್ನು ಬಾಂಗ್ಲಾ ದೇಶಕ್ಕೆ ಬಿಟ್ಟುಕೊಟ್ಟರು, ಇಂತಹ ಜಾಗದಲ್ಲಿ ಭಾರತ್ ಜೋಡೋ ಆಗಬೇಕಿದೆ. ಭಾರತ ಜೋಡೋ ಆಗಿಯೇ ಇದೆ, ನಾವೆಲ್ಲರೂ ಚೆನ್ನಾಗಿ ಇದ್ದೀವಿ, ನಮಗೇನು ಸಮಸ್ಯೆಯಿಲ್ಲ, ಭಾರತದ ಒಳಗೇನು ಸಮಸ್ಯೆಯಿಲ್ಲ. ಭಾರತದ ಗಡಿಭಾಗದಲ್ಲಿ ಭಾರತ ಜೋಡೋ ಕೆಲಸ ಆಗಬೇಕಿದೆ, ಆ ಕೆಲಸವನ್ನು ಆವತ್ತಿನ ಕಾಂಗ್ರೆಸ್ ಮಾಡಿದ್ದರೆ, ಇವತ್ತು ಭಾರತ್ ಜೋಡೋದ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ರಾಹುಲ್‍ಗಾಂಧಿ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ, ಅವರು ಹೋಗಬೇಕಿರುವುದು ಕಾಶ್ಮೀರ, ಹಿಮಾಲಯ ಜಾಗದಲ್ಲಿ, ಆಗ ಭಾರತ್ ಜೋಡೋ ಆಗುತ್ತದೆ ಎಂದು ಟೀಕಿಸಿದ್ದಾರೆ.
Advertisement
ಪ್ರತಿವರ್ಷದಂತೆ ಈ ವರ್ಷ ಕೂಡ ಹಾಸನಾಂಬೆ ದರ್ಶನ ಮಾಡಿದ್ದೇನೆ. ವರ್ಷಕ್ಕೊಮ್ಮೆ ಮಾತ್ರ ರಾಜ್ಯದ, ದೇಶದ ಜನರಿಗೆ ದೇವಿಯ ದರ್ಶನ ಸಿಗುತ್ತದೆ. ಅದಕ್ಕಾಗಿ ಜನರು ಬರುತ್ತಾರೆ, ನಮ್ಮ ಸರ್ಕಾರ ಇದ್ದಾಗ ಹಾಸನಾಂಬೆ ದೇವಾಲಯದ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದೇವೆ. ಆ ತಾಯಿಯ ಆಶೀರ್ವಾದದಿಂದ ಬರುವಂತಹ ದಿನಗಳಲ್ಲಿ ಭಕ್ತಾಧಿಗಳಿಗೆ ಹೆಚ್ಚಿನ ಸೌಲಭ್ಯವನ್ನು ಕೊಡಿಸಲು ಪ್ರಯತ್ನಿಸುತ್ತೇನೆ. ಮುಖ್ಯವಾಗಿ ದೂರದಿಂದ ಬರುವವರಿಗೆ ವಸತಿ, ಶೌಚಾಲಯದಂತಹ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುತ್ತೇವೆ, ದೇಶ ಸುಭಿಕ್ಷವಾಗಬೇಕು, ದೇಶದ ರಕ್ಷಣೆ ಆಗಬೇಕು, ಇವತ್ತು ಮಳೆ ಚೆನ್ನಾಗಿ ಆಗುತ್ತಿದೆ, ಮಳೆಯಿಂದ ಹಾನಿಯು ಆಗುತ್ತಿದೆ. ಆದ್ದರಿಂದ ತಾಯಿ ಹಾಸನಾಂಬೆ ಸಮೃದ್ಧಿಯನ್ನು ಕೊಡಬೇಕು, ಯಾವುದೇ ಅನಾಹುತ ಆಗಬಾರದು ಎಂದಿದ್ದಾರೆ. ಇದನ್ನೂ ಓದಿ: ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಆರಂಭ – ಸಕ್ಕರೆ ಇಲಾಖೆ ತೀರ್ಮಾನ
ಎಲ್ಲಾ ಭಕ್ತಾಧಿಗಳನ್ನು ರಕ್ಷಣೆ ಮಾಡುವಂತಹ ಹೊಣೆಯನ್ನು ತಾಯಿಗೆ ಬಿಡುತ್ತಿದ್ದೇವೆ. ದೇಶಕ್ಕೆ ಒಳ್ಳೆಯದು ಮಾಡಲಿ, ಸಮೃದ್ಧಿಯಾಗಿರಲಿ, ದೇಶದ ರಕ್ಷಣೆ ಆಗಲಿ, ಎಲ್ಲಾ ಜನರು ಸುಖವಾಗಿರುವಂತಹ ಪ್ರಾರ್ಥನೆಯನ್ನು ಮಾಡಿದ್ದೇನೆ. ನರೇಂದ್ರಮೋದಿ ಅವರು ಈ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಭಾರತಕ್ಕೆ ಹೊರ ದೇಶದಲ್ಲಿ ಗೌರವ ಸಿಗುವಂತೆ ಹಾಗೂ ದೇಶದಲ್ಲಿ ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ದೀರ್ಘಾಯುಷ್ಯ, ಶಕ್ತಿಯನ್ನು ಕೊಡಬೇಕು. ನಮ್ಮ ಸರ್ಕಾರಕ್ಕೆ ದೇಶದ ಜನರ ರಕ್ಷಣೆ ಮತ್ತು ಅಭಿವೃದ್ಧಿ ಮಾಡಲು ಶಕ್ತಿ ಕೊಡಬೇಕೆಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.