– ಮಹಿಳೆಯರು ಮನೆಯಲ್ಲೇ ಇರಬೇಕೆಂದು ಬಿಜೆಪಿ, ಆರ್‌ಎಸ್‌ಎಸ್ ಬಯಸುತ್ತದೆ ಎಂದ ರಾಗಾ
– ಭಾರತವನ್ನು ವಿಭಜಿಸಿ ಆಳಬೇಕೆಂಬುದು ರಾಹುಲ್ ಗಾಂಧಿ ಕುತಂತ್ರ; ಬಿಜೆಪಿ ತಿರುಗೇಟು
ವಾಷಿಂಗ್ಟನ್: ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ, ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. ಆದ್ರೆ ಚೀನಾ, ವಿಯೆಟ್ನಾಂನಂತರ ದೇಶಗಳಲ್ಲಿ ಉದ್ಯೋಗ ಸಮಸ್ಯೆಯೇ ಇಲ್ಲ. ಭಾರತವು ಉತ್ಪಾದನಾ ಪರಿಕಲ್ಪನೆ ಕೈಬಿಟ್ಟಿದ್ದೇ ಇದಕ್ಕೆ ಕಾರಣ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಅಮೆರಿಕದ (USA) ಡಲ್ಲಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ವಿರುದ್ಧ ಹರಿಹಾಯ್ದರು. ಆರ್‌ಎಸ್‌ಎಸ್ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ. ಆದ್ರೆ ಕಾಂಗ್ರೆಸ್‌ಗೆ ಬಹುತ್ವ ಭಾರತದಲ್ಲಿ ನಂಬಿಕೆಯಿದೆ ಎಂದಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್ ಪಿತ್ರೋಡಾ
Advertisement
Advertisement
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ, ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಆದ್ರೆ ಚೀನಾ (China), ವಿಯೆಟ್ನಾಂನಲ್ಲಿ ಉದ್ಯೋಗ ಸಮಸ್ಯೆಯೇ (Employment Problem) ಇಲ್ಲ. ಭಾರತವು ಉತ್ಪಾದನಾ ಪರಿಲ್ಪನೆಯ ಕೈಬಿಟ್ಟಿರುವುದರಿಂದ ಅದರ ಲಾಭವನ್ನು ಚೀನಾ ಪಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪಪ್ಪು ಅಲ್ಲ, ದೂರದೃಷ್ಟಿ ಹೊಂದಿರುವ ವ್ಯಕ್ತಿ: ಸ್ಯಾಮ್ ಪಿತ್ರೋಡಾ
Advertisement
ಅಮೆರಿಕ ಜಾಗತಿಕ ಉತ್ಪಾದನಾ ಕೇಂದ್ರವಾಗಿತ್ತು:
1940, 50 ಮತ್ತು 60ರ ದಶಕಗಳಲ್ಲಿ ಅಮೆರಿಕವನ್ನು ನೋಡಿದರೆ, ಅದು ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಕಾರುಗಳು, ವಾಷಿಂಗ್ ಮಿಷಿನ್‌ಗಳು, ಟಿವಿಗಳು, ಎಲ್ಲವೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉತ್ಪಾದನೆಯಾಗುತ್ತಿತ್ತು. ನಂತರ, ಉತ್ಪಾದನಾ ಪ್ರಮಾಣ ಕೊರಿಯಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಂದ ಜಪಾನ್‌ಗೆ ಹೋಯ್ತು. ಅಂತಿಮವಾಗಿ, ಅದು ಚೀನಾಕ್ಕೆ ಹೋಯಿತು. ಇಂದು ನೋಡಿದ್ರೆ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಮೇಲುಗೈ ಸಾಧಿಸುತ್ತಿದೆ. ಅಮೆರಿಕ, ಯುರೋಪ್ ಮತ್ತು ಭಾರತವು ಉತ್ಪಾದನೆಯ ಪರಿಕಲ್ಪನೆ ಕೈಬಿಟ್ಟಿದ್ದೇ ಇದಕ್ಕೆ ಕಾರಣವಾಯಿತು. ಉತ್ಪಾದನಾ ಪರಿಕಲ್ಪನೆಯು ಉದ್ಯೋಗ ಸೃಷ್ಟಿಸುತ್ತದೆ ಎಂದು ಸಲಹೆ ನೀಡಿದರು.
Advertisement
ಪ್ರಧಾನಿ ಮೇಲಿದ್ದ ಭಯ ಹೋಗಿದೆ:
ಇದೇ ವೇಳೆ 2024ರ ಲೋಕಸಭಾ ಚುನಾವಣಾ ಫಲಿತಾಂಶ ಉಲ್ಲೇಖಿಸಿ ಮಾತನಾಡಿದ ಅವರು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬಹುಮತ ನಿರಾಕರಿಸಿದ್ದಾರೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮೇಲೆ ಜನರಿಗೆ ಇದ್ದ ಭಯ ಮಾಯವಾಗಿದೆ. ಭಾರತದ ಪ್ರಧಾನಿ ಮೇಲಿದ್ದ ಭಯವೂ ಹೋಗಿದೆ. ಇದಕ್ಕೆ ಕಾರಣ ರಾಹುಲ್ ಗಾಂಧಿಯಾಗಲಿ, ಕಾಂಗ್ರೆಸ್ ಆಗಲಿ ಅಲ್ಲ. ಭಾರತ ಸಂವಿಧಾನ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಬಳಿಕ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲೂ ಅನೇಕ ವಿಷಯಗಳ ಕುರಿತು ಚರ್ಚಿಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯ ಭಾರತೀಯ ಪುರುಷರಲ್ಲಿ ಮಹಿಳೆಯರ ಬಗೆಗಿನ ವರ್ತನೆಯು ಹಾಸ್ಯಾಸ್ಪದವಾಗಿದೆ. ಹಾಗಾಗಿ ಮಹಿಳೆಯರ ಬಗ್ಗೆ ಯೋಚಿಸುವ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದಿದ್ದಾರೆ.
ಮಹಿಳೆಯರು ಮನೆಯಲ್ಲಿರಬೇಕೆಂಬುದು ಆರ್‌ಎಸ್‌ಎಸ್ ಬಯಕೆ:
ಮುಂದುವರಿದು, ಬಿಜೆಪಿ ಮತ್ತು ಆರ್‌ಎಸ್‌ಎಸ್ ಮಹಿಳೆಯರು ನಿರ್ದಿಷ್ಟ ಪಾತ್ರಕ್ಕೆ ಸೀಮಿತವಾಗಿರಬೇಕು ಎಂದು ಬಯಸುತ್ತದೆ. ಮಹಿಳೆಯರು ಮನೆಯಲ್ಲೇ ಇರಬೇಕು, ಅಡುಗೆ ಮಾಡಿಕೊಂಡಿರಬೇಕು, ಹೆಚ್ಚು ಮಾತನಾಡಬಾರದು ಅಂತ ಬಯಸುತ್ತಾರೆ. ಆದ್ರೆ ಮಹಿಳೆಯರು ಏನು ಮಾಡಲು ಬಯಸುತ್ತಾರೆಯೋ ಅದನ್ನು ಮಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಬಯಸುತ್ತದೆ ಎಂದು ಬಿಜೆಪಿ-ಆರ್‌ಎಸ್‌ಎಸ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಆಯ್ತು ಈಗ ಪಾಕ್‌ನಲ್ಲಿ ಪ್ರತಿಭಟನೆ – ಇಮ್ರಾನ್ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಸಾವಿರಾರು ಬೆಂಬಲಿಗರು
ರಾಗಾ ವಿರುದ್ಧ ಬಿಜೆಪಿ ಕೆಂಡಾಮಂಡಲ:
ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ರಾಹುಲ್ ಗಾಂಧಿ ಅವರಿಗೆ ಭಾರತವನ್ನು ಅವಮಾನಿಸುವ ಅಭ್ಯಾಸ ಯಾವಾಗಲೂ ಇದೆ. ಈಗ ಚೀನಾ ಪರ ಬ್ಯಾಟಿಂಗ್ ಮಾಡಲು ಉತ್ಸುಕರಾಗಿದ್ದಾರೆ. ಭಾರತ ದೇಶವನ್ನು ವಿಭಜಿಸಿ ಆಳಬೇಕೆಂಬುದು ಅವರ ಕುತಂತ್ರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕಿಡಿ ಕಾರಿದ್ದಾರೆ. ಇದನ್ನೂ ಓದಿ: 25 ವರ್ಷಗಳ ಬಳಿಕ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ತನ್ನ ಪಾತ್ರದ ಬಗ್ಗೆ ಪಾಕ್ ತಪ್ಪೊಪ್ಪಿಗೆ!