Connect with us

Gujarat Election

ರಾಹುಲ್ ಗಾಂಧಿ ಧರ್ಮ ಯಾವುದು? ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ ದೇವಾಲಯ ಭೇಟಿ

Published

on

ಅಲಹಾಬಾದ್: ಗುಜರಾತ್ ಸೋಮನಾಥ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ರಾಹುಲ್ ಗಾಂಧಿ ಹಿಂದೂಯೇತರ ಕಾಲಂನಲ್ಲಿ ತಮ್ಮ ಹೆಸರನ್ನು ನಮೂದಿಸಿದ್ದಾರೆ ಎನ್ನಲಾದ ಸುದ್ದಿ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ವಿಚಾರ ಬಿಜೆಪಿಗೆ ದೊಡ್ಡ ಅಸ್ತ್ರವೇ ಸಿಕ್ಕಿದಂತಾಗಿದ್ದು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಮೊದಲು ತನ್ನ ಧರ್ಮ ಯಾವುದು ಅಂತಾ ಘೋಷಿಸಿಕೊಳ್ಳಲಿ. ನನ್ನ ಪ್ರಕಾರ ಅವರು ಕ್ರಿಶ್ಚಿಯನ್ ಅವರು ಪ್ರತಿ ಭಾನುವಾರ ಚರ್ಚ್‍ಗೆ ಭೇಟಿ ನೀಡುತ್ತಾರೆ ಆರೋಪಿಸಿದ್ದಾರೆ.

ಈ ಬೆನ್ನಲ್ಲೇ, ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯವರು ಸುಳ್ಳು ದಾಖಲೆ ತೋರಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕೆ ಮಾಡಿದೆ.

ಆಗಿದ್ದು ಏನು?
ಸೋಮನಾಥ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಬಳಿಕ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಮನೋಜ್ ತ್ಯಾಗಿ ಪುಸ್ತಕ ನೀಡಿದ್ದಾರೆ. ಈ ಪುಸ್ತಕದಲ್ಲಿ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಅಹ್ಮದ್ ಪಟೇಲ್ ಸಹಿ ಹಾಕಿದ್ದಾರೆ.

ರಾಹುಲ್ ಗಾಂಧಿ ಯಾರು?
ಭಾರತದ ಮೊದಲ ಪ್ರಧಾನಿ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ ಅವರು ಮೂಲತಃ ಕಾಶ್ಮೀರಿ ಬ್ರಾಹ್ಮಣರು. ಜವಾಹರ್ ಲಾಲ್ ನೆಹರೂ ಅವರ ಪುತ್ರಿ ಭಾರತದ ಮಾಜಿ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಅವರು ಫಿರೋಜ್ ಅವರನ್ನು ಮದುವೆಯಾದರು. ಫಿರೋಜ್ ಮೂಲತಃ ಪಾರ್ಸಿ ಧರ್ಮಕ್ಕೆ ಸೇರಿದವರಾಗಿದ್ದು ಮದುವೆಯ ಬಳಿಕ ಗಾಂಧಿ ಹೆಸರನ್ನು ತಮ್ಮ ಹೆಸರಿನೊಂದಿಗೆ ಸೇರಿಸಿಕೊಂಡರು. ನಂತರದ ಅವಧಿಯಲ್ಲಿ ಇಂದಿರಾ ಹೆಸರಿನ ಜೊತೆ ಗಾಂಧಿ ಸೇರಿಕೊಂಡಿತು. ಇಂದಿರಾ ಗಾಂಧಿ ಪುತ್ರ ರಾಜೀವ್ ಗಾಂಧಿ ಅವರು ಇಟಲಿ ಮೂಲದ ಸೋನಿಯಾ ಗಾಂಧಿ ಅವರನ್ನು ಪ್ರೀತಿಸಿ ಮದುವೆಯಾದರು. ಸೋನಿಯಾ ಗಾಂಧಿ ಮೂಲತಃ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ರಾಜೀವ್ ಗಾಂಧಿ ಹಾಗೂ ಸೋನಿಯಾ ಪುತ್ರ ರಾಹುಲ್ ಗಾಂಧಿ.

Click to comment

Leave a Reply

Your email address will not be published. Required fields are marked *