ಚಿಕ್ಕಬಳ್ಳಾಪುರ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಹೆದರಿ ಸಂಸದ ಸ್ಥಾನ ಅನರ್ಹಗೊಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಗೌರಿಬಿದನೂರಿನಲ್ಲಿ (Gauribidanur) ಶಾಸಕ ಎನ್.ಎಚ್ ಶಿವಶಂಕರ ರೆಡ್ಡಿಯವರ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ಜೋಡೋ ಯಾತ್ರೆ ನಂತರ ರಾಹುಲ್ ಗಾಂಧಿ ವರ್ಚಸ್ಸು ಜಾಸ್ತಿ ಆಗಿತ್ತು. ಹಾಗಾಗಿ ಅವರಿದ್ದರೆ ಟೀಕೆ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಸದಸ್ಯತ್ವ ತೆಗೆದಿದ್ದಾರೆ ಎಂದು ಗುಡುಗಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ (Rahul Gandhi) ಬದಲು ರಾಜೀವ್ ಗಾಂಧಿ ಎಂದು ಬಾಯಿ ತಪ್ಪಿದರು. ಇದನ್ನೂ ಓದಿ: ದಶಪಥ ಹೆದ್ದಾರಿ ಟೋಲ್‍ನಲ್ಲಿ ತಾಂತ್ರಿಕ ಸಮಸ್ಯೆ, ಫಾಸ್ಟ್ ಟ್ಯಾಗ್ ನಲ್ಲಿ ಪದೇ ಪದೆ ಹಣ ಕಡಿತ
Advertisement
Advertisement
ದೇಶದಲ್ಲಿ ಮಲ್ಯ-ಮೋದಿ ದೇಶದ ದುಡ್ಡು ಕೊಳ್ಳೆ ಹೊಡೆದು ಹೋಗಿದ್ದಾರೆ. ಅವರನ್ನು ಕಳ್ಳರು ಅನ್ನೋದು ತಪ್ಪಾ? ಅದಕ್ಕಾಗಿ ಸದಸ್ಯ ಸ್ಥಾನದಿಂದ ತೆಗೆದು ಹಾಕಿದ್ದು ಸರಿಯೇ? ಟೀಕೆ ಮಾಡುವವರನ್ನ ಮುಗಿಸೋ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.
Advertisement
ಪ್ರಧಾನಿ ರಾಜ್ಯಕ್ಕೆ ಭೇಟಿ ವಿಚಾರವಾಗಿ, ಪ್ರವಾಹ ಬಂದಾಗ, ಕೊರೋನಾ ಕಾಲದಲ್ಲಿ ರಾಜ್ಯಕ್ಕೆ ಮೋದಿ ಬಂದಿರಲಿಲ್ಲ. ವೋಟಿಗಾಗಿ ಈಗ ಬರುತ್ತಿದ್ದಾರೆ, ಜನರಿಗೆ ಇದು ಅರ್ಥ ಆಗಲಿದೆ. ಮೋದಿ 100 ಸಲ ಬಂದರೂ ಏನೂ ಆಗುವುದಿಲ್ಲ ಎಂದಿದ್ದಾರೆ.
Advertisement
ಇದೇ ವೇಳೆ ಮುಸ್ಲಿಂ ಮೀಸಲಾತಿ ರದ್ದು ವಿಚಾರವಾಗಿ ಮಾತನಾಡಿ, ಮೀಸಲಾತಿ ತೆಗೆದು ಹಾಕಿ ಎಂದು ಯಾರಾದರೂ ಪತ್ರ ಕೊಟ್ಟಿದ್ದಾರಾ? ನ್ಯಾಯಾಲಯ ಆದೇಶ ಮಾಡಿದೆಯಾ? ಮುಸ್ಲಿಮರಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿರುವ ದ್ರೋಹದ ಕೆಲಸ ಇದಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮನೆಗೆ ಅಮಿತ್ ಶಾ ತಿಂಡಿಗೆ ಹೋಗಿಲ್ವಾ? – ಹೆಚ್. ವಿಶ್ವನಾಥ್ ಪ್ರಶ್ನೆ