ನವದೆಹಲಿ: ಕೆಂಪುಕೋಟೆಯಲ್ಲಿ (Red Fort) ನಡೆದ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂದು ಕಾಂಗ್ರೆಸ್ (Congress) ಕಿಡಿಕಾರಿದೆ.
नेता विपक्ष श्री @RahulGandhi को स्वतंत्रता दिवस समारोह में पांचवी लाइन में बैठाकर नरेंद्र मोदी ने अपनी कुंठा दिखाई है।
लेकिन इससे जननायक को फर्क नहीं पड़ता।
वैसे भी… छोटे मन के लोगों से बड़ी चीज़ों की उम्मीद करना बेमानी है।
pic.twitter.com/RAH2UXsF20
— Congress (@INCIndia) August 15, 2024
Advertisement
ದಶಕದ ಬಳಿಕ ಇದೇ ಮೊದಲ ಬಾರಿಗೆ ವಿಪಕ್ಷ ನಾಯಕರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದರು. ಆದರೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರಿಗೆ ಮೊದಲ ಸಾಲಿನಲ್ಲಿ ನಿಗದಿ ಮಾಡಬೇಕಿತ್ತು. ಆದರೆ ಐದನೇ ಸಾಲಿನಲ್ಲಿ ನಿಗದಿ ಮಾಡಿ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
Advertisement
ಮೊದಲ ಸಾಲಿನಲ್ಲಿ ಒಲಿಂಪಿಕ್ಸ್ ಪದಕ ವಿಜೇತರಾದ ಮನುಭಾಕರ್, ಸರಬ್ಜೋತ್ ಸಿಂಗ್, ಸಚಿವರಾದ ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸೇರಿ ಹಲವರು ಗಣ್ಯರು ಕುಳಿತಿದ್ದರು. ಪ್ರೋಟೋಕಾಲ್ ಪ್ರಕಾರ ಅಧಿಕೃತ ವಿಪಕ್ಷ ನಾಯಕರಿಗೆ ಮೊದಲ ಸಾಲಿನಲ್ಲಿಯೇ ಆಸನ ನಿಗದಿ ಮಾಡಬೇಕಿತ್ತು.
Advertisement
Advertisement
ಈ ವಿಚಾರ ಜೋರಾಗುತ್ತಿದ್ದಂತೆ ರಕ್ಷಣಾ ಸಚಿವಾಲಯದ ಮೂಲಗಳು, ರಾಹುಲ್ ಗಾಂಧಿ ಅವರಿಗೆ ಮೊದಲ ಸ್ಥಾನದಲ್ಲೇ ಸೀಟ್ ನೀಡಲಾಗಿತ್ತು. ಆದರೆ ಅವರು ಒಲಿಂಪಿಕ್ಸ್ ಪದಕ ವಿಜೇತರ ಜೊತೆ ಕೂರುವುದಾಗಿ ಹೇಳಿದ್ದರಿಂದ ಅವರಿಗೆ ಅಲ್ಲಿ ಸೀಟ್ ನಿಗದಿ ಮಾಡಲಾಗಿದೆ ಎಂದು ತಿಳಿಸಿವೆ.
ಸೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವಾಲಯದಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.