ಚಮ್ಮಾರನಿಗೆ ಹೊಲಿಗೆ ಯಂತ್ರ ಕೊಡಿಸಿ ಮಾನವೀಯತೆ ಮೆರೆದ ರಾಗಾ

Public TV
2 Min Read
UTTAR PRADESH COBBLER STICHING MACHINE BY RAHUL GANDHI

ಲಕ್ನೋ: ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಉತ್ತರಪ್ರದೇಶದ (Uttar Pradesh) ಸುಲ್ತಾನಪುರದಲ್ಲಿರುವ ಚಪ್ಪಲಿ ಹೊಲಿಯುವ ಚಮ್ಮಾರನನ್ನು (Cobbler) ಭೇಟಿ ಮಾಡಿದ ಮರುದಿನವೇ ಅವರಿಗೆ ಶೂ ಹೊಲಿಯುವ ಯಂತ್ರವೊಂದನ್ನು (Shoe Stiching Machine) ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಶುಕ್ರವಾರವಷ್ಟೇ ರಾಹುಲ್ ಗಾಂಧಿ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಲಕ್ನೋಗೆ ತೆರಳುವ ವೇಳೆ ಸುಲ್ತಾನ್‌ಪುರದ ಬೀದಿಬದಿಯಲ್ಲಿದ್ದ ಚಮ್ಮಾರ ರಾಮ್ ಚೈತ್ ಎಂಬವರ ಅಂಗಡಿಗೆ ಭೇಟಿ ನೀಡಿ ಕಷ್ಟಸುಖ ಆಲಿಸಿದ್ದರು. ಅಲ್ಲದೇ ತಾವೂ ಚಪ್ಪಲಿ ಸರಿಪಡಿಸುವ ವಿಧಾನವನ್ನು ಕಲಿತಕೊಂಡು ಚಪ್ಪಲಿ ಸರಿಪಡಿಸಲು ಪ್ರಯತ್ನಿಸಿದ್ದರು. ಇದನ್ನೂ ಓದಿ:  ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ 14 ದಿನ ನ್ಯಾಯಾಂಗ ಬಂಧನ

Rahul Gandhi cobblers shop visit sultanpur

ಈ ವೇಳೆ ಚಮ್ಮಾರ ರಾಮ್ ಚೈತ್ ತಮ್ಮ ಕಷ್ಟಗಳನ್ನು ರಾಹುಲ್ ಗಾಂಧಿ ಬಳಿ ತೋಡಿಕೊಂಡು ತನಗೆ ನೆರವಾಗುವಂತೆ ಕೇಳಿಕೊಂಡಿದ್ದರು. ಇದಕ್ಕೆ ರಾಹುಲ್ ಗಾಂಧಿ ಅವರಿಗೆ ಸಹಾಯ ಮಾಡುವ ಭರವಸೆಯನ್ನು ನೀಡಿದ್ದರು. ಈ ಹಿನ್ನೆಲೆ ಶನಿವಾರ (ಜು.27) ಶೂ ಹೊಲಿಯುವ ಯಂತ್ರವೊಂದನ್ನು ರಾಮ್ ಚೈತ್ ಅವರಿಗೆ ಕಳುಹಿಸಿಕೊಟ್ಟು ತಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಲೆ ಎತ್ತಲಿದೆ ಸ್ಕೈ ಡೆಕ್ – 12 ಸಾವಿರ ಕೋಟಿ ವೆಚ್ಚದಲ್ಲಿ 100 ಕಿಮೀ ಫ್ಲೈಓವರ್‌ ನಿರ್ಮಿಸಲು ಪ್ಲ್ಯಾನ್‌!

rahul gandhi cobblers shop visit sultanpur 3

ಚಮ್ಮಾರ ರಾಮ್ ಚೈತ್ ಅವರಿಗೆ ಶನಿವಾರ ಬೆಳಗ್ಗೆ ಫೋನ್ ಕರೆ ಬಂದಿದ್ದು, ರಾಹುಲ್ ಗಾಂಧಿ ನಿಮಗೆ ಶೂ ಹೊಲಿಗೆ ಯಂತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ಮಧ್ಯಾಹ್ನದ ನಂತರ ರಾಹುಲ್ ಗಾಂಧಿ ತಂಡದ ಸದಸ್ಯರು ಯಂತ್ರವನ್ನು ವಿತರಿಸಲು ಪೊಲೀಸ್ ಜೀಪಿನಲ್ಲಿ ರಾಮ್ ಚೈತ್ ಅವರ ಅಂಗಡಿಗೆ ಆಗಮಿಸಿದರು. ಇದನ್ನೂ ಓದಿ: ಪ್ರೇಯಸಿಯನ್ನೇ ಬರ್ಬರವಾಗಿ ಇರಿದು ಕೊಂದ ಪ್ರಿಯಕರ – ಶವವನ್ನು ಪೊದೆಗೆ ಎಸೆದು ಎಸ್ಕೇಪ್

rahul gandhi cobblers shop visit sultanpur 2

ಇದರಿಂದ ಅತೀವ ಸಂತಸಗೊಂಡ ರಾಮ್ ಚೈತ್ ರಾಹುಲ್ ಗಾಂಧಿಗೆ ಧನ್ಯವಾದ ಸೂಚಿಸಲು ಎರಡು ಜೊತೆ ಶೂಗಳನ್ನು ಕಳುಹಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೇ ತಂಡದ ಕೆಲವು ತಜ್ಞರು ರಾಮ್ ಚೈತ್ ಅವರಿಗೆ ಯಂತ್ರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಮಾಹಿತಿ ಒದಗಿಸಿದ್ದಾರೆ. ಇದನ್ನೂ ಓದಿ: ಸಿನಿಮಾ ಟಿಕೆಟ್, OTT ಸಬ್‌ಸ್ಕ್ರಿಪ್ಶನ್ ಮೇಲೆ ಸೆಸ್‌ ವಿಧಿಸಲು ತೀರ್ಮಾನ – ಫಿಲ್ಮ್‌ ಚೇಂಬರ್‌ ಅಸಮಾಧಾನ

rahul gandhi cobblers shop visit sultanpur 1

ಇನ್ನು ಈ ಕುರಿತು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ನಿನ್ನೆ ನಮ್ಮ ನಾಯಕ ರಾಹುಲ್ ಗಾಂಧಿಯವರು ಸುಲ್ತಾನ್‌ಪುರದಲ್ಲಿ (ಯುಪಿ) ಚಮ್ಮಾರ ರಾಮ್ ಚೈತ್ ಅವರನ್ನು ಭೇಟಿಯಾಗಿ ಅವರ ಕೆಲಸದ ವಿವರಗಳ ಬಗ್ಗೆ ತಿಳಿದುಕೊಂಡರು. ಅವರನ್ನು ಬೆಂಬಲಿಸಲು ಇಂದು ರಾಹುಲ್ ಗಾಂಧಿ ಅವರು ಶೂ ಹೊಲಿಯುವ ಯಂತ್ರವನ್ನು ಕಳುಹಿಸಿದ್ದಾರೆ. ಅದು ಅವರ ಕೆಲಸವನ್ನು ಸುಲಭಗೊಳಿಸುತ್ತದೆ. ರಾಹುಲ್ ಗಾಂಧಿ ನಿಜವಾಗಿಯೂ ಎಲ್ಲರಿಗೂ ನಾಯಕ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಕಬಿನಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿ – ಸೋಮವಾರ ಸಿದ್ದರಾಮಯ್ಯ, ಡಿಕೆಶಿ ಬಾಗಿನ ಅರ್ಪಣೆ

Share This Article