ಇಂಫಾಲ್: ರಾಹುಲ್ ಗಾಂಧಿ ಕುಟುಂಬ ಮಣಿಪುರವನ್ನು ಎಟಿಎಂ ಆಗಿ ಬಳಸಿಕೊಂಡಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
Advertisement
ರಾಹುಲ್ ಗಾಂಧಿಯವರ ಕುಟುಂಬವು ಮಣಿಪುರವನ್ನು ಎಟಿಎಂ ಆಗಿ ಬಳಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದರು. ಸುಮಾರು 11 ಕೋಟಿ ರೈತರಿಗೆ ಪ್ರತಿ ವರ್ಷ 6,000 ರೂ.ಗಳನ್ನು ನೀಡಲಾಗುತ್ತದೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಮಣಿಪುರದ ರೈತರಿಗೆ ಹೆಚ್ಚುವರಿಯಾಗಿ 2000 ರೂ. ನೀಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಲಪಾಡ್ ವಿರುದ್ಧ ಎಫ್‍ಐಆರ್ ದಾಖಲು
Advertisement
Advertisement
ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪುನಃ ಆಯ್ಕೆಯಾದರೆ ಮಣಿಪುರದಲ್ಲಿ ಸ್ಟಾರ್ಟ್ಅಪ್‌ಗಳಿಗಾಗಿ 100 ಕೋಟಿ ರೂಪಾಯಿಗಳ ಕಾರ್ಪಸ್ ನಿಧಿಯನ್ನು ರಚಿಸಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶ ಪಾಲಿಸಿ – ಅಂಜುಮನ್ ಸಂಸ್ಥೆಯಿಂದ ಮನವಿ
Advertisement
Rahul Gandhi’s family used Manipur as ATM but PM Modi launched the Kisan Samman Nidhi scheme. 11 crore farmers are given Rs 6,000 every year… If voted to power again, we’ll give additional Rs 2000 to the farmers of Manipur: Union Minister Smriti Irani in Manipur (18.02) pic.twitter.com/chYqW9GjKO
— ANI (@ANI) February 19, 2022
ಕಳೆದ ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದೇಶದಲ್ಲಿ 60,000 ಸ್ಟಾರ್ಟ್ಅಪ್‌ಗಳ ಸೃಷ್ಟಿಗೆ ಉತ್ತೇಜನ ನೀಡಿದೆ. ರಾಜ್ಯದಲ್ಲಿ ಬಿಜೆಪಿ ತನ್ನ ಸರ್ಕಾರವನ್ನು ರಚಿಸಿದರೆ, ಮಣಿಪುರದಲ್ಲಿ ಸ್ಟಾರ್ಟ್ಅಪ್‌ಗಳಿಗಾಗಿ ಪ್ರತ್ಯೇಕವಾಗಿ 100 ಕೋಟಿ ರೂಪಾಯಿಗಳ ಕಾರ್ಪಸ್ ಫಂಡ್ ಅನ್ನು ನೀಡುತ್ತದೆ ಎಂದಿದ್ದಾರೆ.