ಹೈದರಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಅಜ್ಜಿ ಮತ್ತು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಪುಣ್ಯಸ್ಮರಣೆ ಪ್ರಯುಕ್ತ ಭಾವನಾತ್ಮಕ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವರ ಅಖಂಡ ಭಾರತದ ಕನಸನ್ನು ಈಡೇರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
Advertisement
ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್‌ನಲ್ಲಿ ಇಂದಿರಾ ಗಾಂಧಿ ಅವರ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಅಜ್ಜಿಯ ಅಂತ್ಯಕ್ರಿಯೆ ವೇಳೆ ರಾಹುಲ್ ಅಳುತ್ತಿರುವ, ಅನೇಕ ವರ್ಷಗಳು ಇಂದಿರಾಗಾಂಧಿ ಅವರು ಮಾಡಿರುವ ಭಾಷಣದ ತುಣುಕುಗಳನ್ನು ಕಾಣಬಹುದಾಗಿದೆ. ಇಂದಿರಾಗಾಂಧಿ ಅವರು ಅಖಂಡ ಭಾರತಕ್ಕಾಗಿ ಕರೆ ನೀಡುತ್ತಿರುವ ಮತ್ತು ಅದರಂತೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿರುವಂತೆ ವೀಡಿಯೋ ಮುಕ್ತಾಯಗೊಳ್ಳುತ್ತದೆ.
Advertisement
दादी, आपका प्यार और संस्कार दोनों दिल में ले कर चल रहा हूं। जिस भारत के लिए आपने अपना सर्वस्व बलिदान कर दिया, उसे बिखरने नहीं दूंगा। pic.twitter.com/wZ9NSgbFd6
— Rahul Gandhi (@RahulGandhi) October 31, 2022
Advertisement
ವೀಡಿಯೋ ಜೊತೆಗೆ, ಅಜ್ಜಿ, ನಾನು ನಿಮ್ಮ ಪ್ರೀತಿ ಮತ್ತು ಮೌಲ್ಯಗಳೆರಡನ್ನೂ ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನೀವು ಯಾವ ಭಾರತಕ್ಕಾಗಿ ನಿಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದೀರೋ ಆ ಭಾರತವನ್ನು ಒಡೆಯಲು ನಾನು ಬಿಡುವುದಿಲ್ಲ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಸಕ ಶಿವನಗೌಡ ನಾಯಕ್‍ರಿಂದ ಜೆಡಿಎಸ್ ಅಭ್ಯರ್ಥಿಗೆ ಜೀವ ಬೆದರಿಕೆ: ಎಸ್‍ಪಿಗೆ ದೂರು
Advertisement
ಪ್ರಸ್ತುತ ತೆಲಂಗಾಣದಲ್ಲಿ (Telangagana) ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಸುತ್ತಿರುವ ರಾಹುಲ್ ಗಾಂಧಿ ಅವರು ತಮ್ಮ ಅಜ್ಜಿಗೆ ಪುಷ್ಪ ನಮನ ಸಲ್ಲಿಸಿದರು. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಮತ್ತು ಪಕ್ಷದ ಇತರ ಹಿರಿಯ ನಾಯಕರು ಸಹ ಇಂದಿರಾ ಗಾಂಧಿ (Indira Gandhi) ಅವರ ಸ್ಮಾರಕಕ್ಕೆ ಇಂದು ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ಪೊಲೀಸ್ ಹುದ್ದೆಗೆ 70-80 ಲಕ್ಷ ಹಣ – ಹೇಳಿಕೆ ನನ್ನದಲ್ಲವೆಂದು ಉಲ್ಟಾ ಹೊಡೆದ MTB
ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು 1984ರ ಅಕ್ಟೋಬರ್ 31ರಂದು ಅವರ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದರು.