ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಗ್ಗೆ 8.30ಕ್ಕೆ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಿಂದ ಶುರು ಮಾಡಿದ ರಾಹುಲ್ ದಿನವಿಡಿ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Advertisement
ಅಶೋಕ ಹೋಟೆಲ್‍ನಲ್ಲಿ ಮಾಧ್ಯಮದವರೊಂದಿಗೆ ಬೆಳಿಗ್ಗಿನ ಉಪಹಾರ ಕೂಟದಲ್ಲಿ ಭಾಗವಹಿಸುವ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನ ತಮ್ಮ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉಪಹಾರ ಸೇವಿಸುತ್ತಾ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ರಾಹುಲ್ ಗೆ ಸಾಥ್ ನೀಡಿದ ಸಿಎಂ ಸಿದ್ದರಾಮಯ್ಯ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭಿನ್ನಮತೀಯರಿಗೆಲ್ಲ ಟಿಕೆಟ್ ಕೊಡುತ್ತೇವೆ ಏಳು ಜನರು ಕೂಡ ಸ್ಪರ್ಧೆ ಮಾಡುತ್ತಾರೆ. ಪುಲಿಕೇಶಿನಗರದಲ್ಲಿ ಟಿಕೆಟ್ ಹಂಚಿಕೆ ಕುರಿತು ಎರಡು ದಿನಗಳ ಕಾಲ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ ಅಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದು ತಿಳಿಸಿದರು.
Advertisement
ನಗರದ ಜಕ್ಕರಾಯನ ಕೆರೆ ಸ್ಲಂ ಬಳಿ ಪೌರ ಕಾರ್ಮಿಕರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು. ಸಂವಾದ ಸಂದರ್ಭದಲ್ಲಿ ಜನರ ಬಳಿಗೆ ಬರುವಾಗ ತಾವೇ ಸ್ವತಃ ಖುರ್ಚಿ ತೆಗೆದುಕೊಂಡು ಬಂದು ಕುಳಿತು ಆತ್ಮೀಯರೆನಿಸಿದರು. ದಿಢೀರ್ ಭೇಟಿ ಭಾಗವಾಗಿ ಪೌರಕರ್ಮಿರರೊಂಬ್ಬರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿ ಕಾರ್ಮಿಕರೊಬ್ಬರ ಮನೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಆತಿಥ್ಯ ಸ್ವೀಕರಿಸಿದರು. ಇದನ್ನೂ ಓದಿ: ಮಹಿಳಾ ಸಾಧಕರ ಜೊತೆ ರಾಹುಲ್ ಸಂವಾದ ವೇಳೆ ರಮ್ಯಾ ದರ್ಪ!
Advertisement
Advertisement
ಸೆಂಟ್ರಲ್ ಕಾಲೇಜಿನ ಜ್ಞಾನಜೋತಿ ಆವರಣದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಜಿಎಸ್‍ಟಿ ಸಮಸ್ಯೆಗಳು, ಎಪಿಎಂಸಿ ಮಾರುಕಟ್ಟೆ ಸಮಸ್ಯೆಗಳು, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಆಥೀಕತೆ ಕುರಿತು ಉದ್ಯಾಮಿಗಳು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದರು. ಬಳಿಕ ಬ್ಲೂ ರ್ಯಾಡಿಸನ್ ಹೋಟೆಲ್‍ನಲ್ಲಿ ಆಯ್ದ ಮಹಿಳಾ ಸಾಧಕಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂವಾದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಎಂಟ್ರಿ ಕೊಡದೆ ನಟಿ, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ದರ್ಪ ಪ್ರದರ್ಶಿಸಿದರು. ಇದನ್ನೂ ಓದಿ: ಕೈ ಸಮಾವೇಶದಲ್ಲಿ ತಪ್ಪಿದ ಭಾರೀ ದುರಂತ- ನೋಡನೋಡ್ತಿದಂತೆ ಉರುಳಿ ಬಿತ್ತು ಬೃಹತ್ ಕಟೌಟ್
ಇದೇ ವೇಳೆ ರಾಹುಲ್ ಗಾಂಧಿ ನಮ್ಮ ಮೆಟ್ರೋದಲ್ಲಿ ರೌಂಡ್ಸ್ ಹಾಕಿ ಗಮನ ಸೆಳೆದರು. ಸಾಮಾನ್ಯ ಪ್ರಯಾಣಿಕರಂತೆ ರಾಹುಲ್ ಗಾಂಧಿ ವಿಧಾನ ಸೌಧ ಮೆಟ್ರೋ ಸ್ಟೇಷನ್‍ನಿಂದ ಎಂ.ಜಿ ರಸ್ತೆ ಮೆಟ್ರೋ ಸ್ಟೇಷನ್ ವರೆಗೆ ಪ್ರಯಾಣ ಬೆಳೆಸಿದರು. ಸಿಎಂ ಸಿದ್ಧರಾಮಯ್ಯ ಖುದ್ದು ಟಿಕೇಟ್ ಖರೀದಿಸಿದರು. ಮೆಟ್ರೋನಲ್ಲಿ ನಿಂತೆ ಕಾಂಗ್ರೆಸ್ ನಾಯಕರ ಜೊತೆ ಪ್ರಯಾಣವನ್ನು ರಾಹುಲ್ ಗಾಂಧಿ ಎಂಜಾಯ್ ಮಾಡಿದರು. ಈ ವೇಳೆ ಪ್ರಯಾಣಿಕರು ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟರು. ಇದನ್ನೂ ಓದಿ: ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡಲು ಚಿಂತನೆ: ರಾಹುಲ್ ಗಾಂಧಿ