ಬೆಂಗಳೂರು: ಅಮೆರಿಕಾದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು (Rahul Gandhi) ಮೀಸಲಾತಿ ರದ್ದು ಮಾಡುವ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ದೇಶಾದ್ಯಂತ ವಿರೋಧ ಪಕ್ಷಗಳು, ದಲಿತ ಸಮುದಾಯಗಳು ಕುಪಿತಗೊಂಡಿವೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಈಗ ರಾಹುಲ್ ಅವರ ಹೇಳಿಕೆಗೆ ಉತ್ತರ ಕೊಡಲಾಗದೇ ತೇಪೆ ಹಾಕುವ ಕೆಲಸ ಮಾಡುತ್ತಿದ್ದಾರೆ. ದೇಶದ ಪ್ರಥಮ ಪ್ರಧಾನಿ ನೆಹರೂ (Jawaharlal Neharu) ಅವರು ಆ ಕಾಲದಲ್ಲೇ ಇದನ್ನು ಹೇಳಿದ್ದರು. ಮೀಸಲಾತಿ ಸರಿಯಾದ ಕ್ರಮ ಅಲ್ಲ. ಇದೊಂದು ಅನಿಷ್ಟ. ಇದರಿಂದ ದೇಶ ಉದ್ಧಾರವಾಗದು. ಇದರ ಬಗ್ಗೆ ನನಗೆ ಒಲವಿಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ನೆಹರೂ ಪತ್ರ ಬರೆದಿದ್ದರು. ಈ ಪತ್ರದ ಕುರಿತು ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕೂಡ ಸದನದಲ್ಲಿ ಪ್ರಸ್ತಾಪ ಮಾಡಿ ಪತ್ರ ಪ್ರದರ್ಶನ ಮಾಡಿದ್ದರು ಎಂದು ವಿವರಿಸಿದ್ದಾರೆ.ಇದನ್ನೂ ಓದಿ: ಶಿಮ್ಲಾದಲ್ಲಿ ಅಕ್ರಮ ಮಸೀದಿ ನಿರ್ಮಾಣ ವಿಚಾರ – ಸ್ಥಳೀಯರು, ಪೊಲೀಸರ ನಡುವೆ ಗಲಾಟೆ
Advertisement
Advertisement
ಮೀಸಲಾತಿ ವಿಚಾರದಲ್ಲಿ ನೆಹರೂ ಅವರ ಮನೋಭಾವವನ್ನೇ ರಾಹುಲ್ ಅವರೂ ಪ್ರಸ್ತಾಪ ಮಾಡಿದ್ದಾರೆ. ಕಾಂಗ್ರೆಸ್ ದಲಿತ ವಿರೋಧಿ. ಕಾಂಗ್ರೆಸ್ಸಿಗರು ಹೇಳೋದೊಂದು ಮಾಡೋದೊಂದು. ಮೀಸಲಾತಿಗೆ ವಿರುದ್ಧವಾಗಿಯೇ ಇದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಇವರು ಓಲೈಕೆ ಮಾಡಿ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Advertisement
ರಾಹುಲ್ ಗಾಂಧಿಯವರಿಗೆ ಸರಿಯಾದ ಪಾಠ ಕಲಿಸಬೇಕಿದೆ. ಈ ಕಾಂಗ್ರೆಸ್ಸಿಗೂ ಬುದ್ಧಿ ಕಲಿಸಬೇಕಾಗಿದೆ. ರಾಹುಲ್ ಗಾಂಧಿಯವರು ಮಾನಸಿಕ ಅಸ್ವಸ್ಥರಂತೆ ಭಾರತ ದೇಶದ ಮಾನಹಾನಿ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಿಂದಾಗ್ಗೆ ಭಾರತ ದೇಶದ ಮಾನಹಾನಿ ಮಾಡುವುದನ್ನು ನಾವು ಗಮನಿಸುತ್ತಿದ್ದೇವೆ. ಈ ದೇಶದ ಮಣ್ಣಿನಿಂದ ಹೊರಗಡೆ ಹೋದ ತಕ್ಷಣ ಭಾರತವನ್ನು ಅಪಮಾನ ಮಾಡುತ್ತಲೇ ಇರುತ್ತಾರೆ. ಇವತ್ತೂ ಅದನ್ನು ಮುಂದುವರೆಸಿದ್ದಾರೆ. ನಾವು ಈ ದೇಶವನ್ನು ತಾಯಿಗೆ ಹೋಲಿಸಿ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಭಾರತಾಂಬೆಯ ಕುರಿತು ರಾಹುಲ್ ಅವರ ಹೇಳಿಕೆ ಪೀಡಕ ಎಂದರೆ, ಸ್ಯಾಡಿಸ್ಟ್ ಮನೋಭಾವದಿಂದ ಕೂಡಿದೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಟಾಟಾ ನೆಕ್ಸಾನ್ EV ಬೆಲೆ 3 ಲಕ್ಷ ರೂಪಾಯಿ ಕಡಿತ
Advertisement
ತಾಯಿಯನ್ನು ವಿವಸ್ತ್ರಗೊಳಿಸುವಂತಹ ಮಾತು ಅವರದು. ಈ ಮಾತು ಹೇಳಲು ನೋವಾಗುತ್ತದೆ. ಇವರು ವಿರೋಧ ಪಕ್ಷದ ನಾಯಕರಾಗಲು ಯೋಗ್ಯರೇ? ಇವರಿಗೆ ಎಂಥ ಪಾಠ ಕಲಿಸಬೇಕು. 2014, 2029ರಲ್ಲಿ ಅಧಿಕೃತ ವಿಪಕ್ಷ ಸ್ಥಾನ ಇರದ ಕಾರಣ ರಾಹುಲ್ ಅವರು ವಿಪಕ್ಷ ನಾಯಕರಾಗಲಿಲ್ಲ. ಈ ಬಾರಿ ಅಧಿಕೃತ ವಿಪಕ್ಷ ಸ್ಥಾನ ಸಿಕ್ಕಿದಾಗ ಬೇರೆಲ್ಲರನ್ನೂ ಬದಿಗೆ ಸರಿಸಿ ವಿಪಕ್ಷ ನಾಯಕರಾಗಿದ್ದಾರೆ. ಆದರೆ, ಅವರು ಈ ಸ್ಥಾನಕ್ಕೆ ಅರ್ಹರಲ್ಲ ಎಂದು ತಿಳಿಸಿದರು.
ವಿದೇಶಕ್ಕೆ ಹೋಗಿ ದೇಶದ ಅಪಮಾನ ಮಾಡುವುದು, ಕೆಟ್ಟದಾಗಿ ನಡೆದುಕೊಳ್ಳುವುದು ಎಷ್ಟು ಸರಿ. ವಿಪಕ್ಷ ನಾಯಕನಾಗಿ ದೇಶದೊಳಗಡೆ ತಪ್ಪುಗಳನ್ನು ಹೇಳಬೇಕಿತ್ತು. ನೀವು ಹೊರದೇಶದಲ್ಲಿ ಭಾರತದ ಅವಮಾನ ಮಾಡುವುದು ಸರಿಯೇ? ಮೀಸಲಾತಿ ಯಾವ ಕಾರಣಕ್ಕೆ ಬಂದಿದೆ? ಬಡತನ ಎಂದರೇನು? ಎಂಬುದು ನಿಮಗೆ ಗೊತ್ತಿದೆಯೇ? ನೀವೆಲ್ಲರೂ ಶ್ರೀಮಂತಿಕೆಯಿಂದ ಮೆರೆಯುತ್ತಿದ್ದೀರಿ. ಬಡವರ ಬಗ್ಗೆ ಚಿಂತನೆ ಬಿಟ್ಟು, ಅವರ ಶ್ರೇಯೋಭಿವೃದ್ಧಿ ಬಯಸುವುದು ಬಿಟ್ಟು ಮೀಸಲಾತಿ ತೆಗೆಯುವುದಾದರೆ ನಿಮ್ಮ ಕಾಂಗ್ರೆಸ್ ಪಕ್ಷವು ಈ ದೇಶದಿಂದಲೇ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ನಾವು ಜನರನ್ನು ಸಜ್ಜುಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.