ಜೈಪುರ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು (Bharat Jodo Yatra) ಯಶಸ್ವಿಯಾಗಿ ನೂರು ದಿನಗಳನ್ನು ಪೂರೈಸಿದೆ. ಕಾಂಗ್ರೆಸ್ ನಾಯಕರು ಹರ್ಷಗೊಂಡಿದ್ದು, ಭಾರತ್ ಜೋಡೋ ಯಾತ್ರೆಯು ಜನಸಾಮಾನ್ಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪ್ರತಿಪಾದಿಸಿದೆ. ಇದು ದೊಡ್ಡ ಸಾಧನೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.
नफ़रतों के शोर में मोहब्बत की किलकारियां गूंज रही है।
टूटती उम्मीदों के बीच भरोसे की कड़ियाँ जुड़ रही है।
इतिहास की धारा नई दिशा में मुड़ रही है।#100DAYSOFYATRA pic.twitter.com/bZ9Sd1TnQw
— Congress (@INCIndia) December 16, 2022
ಇಂದು ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ (Bharat Jodo Yatra) ನಡೆಯುತ್ತಿದ್ದು, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ (KC Venugopal), ಸಚಿನ್ ಪೈಲಟ್ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ: ಪಕ್ಷಕ್ಕೆ ತೊಂದರೆಯಾದ್ರೆ ನೀವಿಬ್ಬರೇ ಕಾರಣ – ಸಿದ್ದು, ಡಿಕೆಶಿಗೆ ಕೆ.ಸಿ ವೇಣುಗೋಪಾಲ್ ಖಡಕ್ ವಾರ್ನಿಂಗ್
ಈ ಕುರಿತು ಮಾತನಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ದೇಶದ ಜನಸಾಮಾನ್ಯರ ಸಮಸ್ಯೆಗಳನ್ನು ಎತ್ತಿ ತೋರಿಸಿರುವುದು ಜೋಡೋ ಯಾತ್ರೆಯ ದೊಡ್ಡ ಸಾಧನೆ. ಅಲ್ಲದೇ ಗಾಂಧಿ ಅವರ ವ್ಯಕ್ತಿತ್ವವನ್ನು ಕುಗ್ಗಿಸುವ ಬಿಜೆಪಿ (BJP) ಪ್ರಯತ್ನವನ್ನೂ ನಾಶಪಡಿಸಿದ್ದೇವೆ ಎಂದು ಬೀಗಿದ್ದಾರೆ. ಇದನ್ನೂ ಓದಿ: ರಸ್ತೆಗಿಳಿಯಲಿದೆ ಟೋಯಿಂಗ್ ವಾಹನಗಳು – BBMP ನಿರ್ಧಾರಕ್ಕೆ ವಾಹನ ಸವಾರರು ಗರಂ
भारत जोड़ो यात्रा ने 100 दिन पूरे कर लिए हैं।
सभी भारत यात्रियों और ख़ासतौर से श्री @RahulGandhi जी को बहुत-बहुत बधाई।
यात्रा को लाखों लोगों का समर्थन, सहयोग व विश्वास मिला है।
ये एक ‘राष्ट्रीय जन-आंदोलन’ है।#100DAYSOFYATRA pic.twitter.com/ItEEoJHCMp
— Mallikarjun Kharge (@kharge) December 16, 2022
ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸೇರಿ 8 ರಾಜ್ಯಗಳಲ್ಲಿ ಸಂಚರಿಸಿದ್ದು, ಈಗ ರಾಜಸ್ಥಾನದಲ್ಲಿ ಸಂಚರಿಸುತ್ತಿದೆ.
आज #100DAYSOFYATRA के अवसर पर हिमाचल प्रदेश के मुख्यमंत्री श्री सुखविंदर सिंह सुक्खू, उपमुख्यमंत्री श्री मुकेश अग्निहोत्री, प्रदेशाध्यक्ष प्रतिभा सिंह जी व सभी विधायकों ने भारत जोड़ो यात्रा में राहुल गांधी जी के साथ कदम से कदम मिलाए। pic.twitter.com/6aLoED2Z2J
— Congress (@INCIndia) December 16, 2022
ಈಗಾಗಲೇ 2,800 ಕಿಮೀ ಕ್ರಮಿಸಿರುವ ರಾಹುಲ್‌ಗಾಂಧಿ ಹಾಗೂ ಬೆಂಬಲಿಗರು ವಿರೋಧಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸೆಂಬರ್ 24 ರಂದು ಯಾತ್ರೆ ದೆಹಲಿ ಪ್ರವೇಶಿಸಲಿದ್ದು, 8 ದಿನಗಳ ವಿರಾಮದ ನಂತರ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಹಾಗೂ ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿದೆ.