ತಿರುವನಂತಪುರಂ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಇಂದು ತಮ್ಮ ಕ್ಷೇತ್ರ ವಯನಾಡ್‍ಗೆ ಭೇಟಿ ನೀಡಲಿದ್ದಾರೆ.
ಮೂರು ದಿನಗಳ ಕಾಲ ವಯನಾಡ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು, ತಮ್ಮ ಕ್ಷೇತ್ರದಲ್ಲಿ ಮನಂತವಾಡಿಯಲ್ಲಿ ರೈತರ ಬ್ಯಾಂಕ್ ಕಟ್ಟಡ ಉದ್ಘಾಟನೆ ಮತ್ತು ಸುಲ್ತಾನ್ ಬತ್ತೇರಿಯಲ್ಲಿ ಯುಡಿಎಫ್ ಬಹುಜನ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ರಾಹುಲ್ ಗಾಂಧಿ ಕಚೇರಿ ಧ್ವಂಸ
Advertisement
Advertisement
Advertisement
ಶುಕ್ರವಾರ ಬೆಳಗ್ಗೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬರಮಾಡಿಕೊಳ್ಳಲಿದ್ದಾರೆ. ನಂತರ ಭಾನುವಾರ ಕೋಝಿಕ್ಕೋಡ್‍ನಿಂದ ದೆಹಲಿಗೆ ವಾಪಸಾಗಲಿದ್ದಾರೆ.
Advertisement
ಭಾರತೀಯ ವಿದ್ಯಾರ್ಥಿ ಫೆಡರೇಶನ್(ಎಸ್‍ಎಫ್‍ಐ) ಕಾರ್ಯಕರ್ತರು ಕೇರಳದ ವಯನಾಡಿನ ಕಲ್ಪೆಟ್ಟಾದಲ್ಲಿರುವ ರಾಹುಲ್ ಗಾಂಧಿ ಅವರ ಸಂಸದರ ಕಚೇರಿ ಕಡೆಗೆ ಶುಕ್ರವಾರ ಮಧ್ಯಾಹ್ನ ನಡೆಸಿದ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಕಚೇರಿಗೆ ನುಗ್ಗಿ ಕಟ್ಟಡದ ಬಾಗಿಲು, ಕಿಟಕಿಗಳನ್ನು ಧ್ವಂಸಗೊಳಿಸಿದ್ದರು. ಇದನ್ನೂ ಓದಿ: ಬಿಜೆಪಿ `ಮಹಾ’ ಮಾಸ್ಟರ್ ಪ್ಲಾನ್ – ಅಂದು ಅಟೋ ಡ್ರೈವರ್ ಇಂದು ಚೀಫ್ ಮಿನಿಸ್ಟರ್
ಗುಡ್ಡಗಾಡು ಪ್ರದೇಶವಾದ ವಯನಾಡಿನಲ್ಲಿ ಈಗ ತೀವ್ರವಾಗಿ ಕಾಡುತ್ತಿರುವ ಪರಿಸರ ಸೂಕ್ಷ್ಮ ವಲಯ(ಇಎಸ್‍ಝಡ್) ವಿಚಾರದಲ್ಲಿ ಸಂಸದರು ಮಧ್ಯಪ್ರವೇಶಿಸದಿರುವುದರ ವಿರುದ್ಧ ಎಸ್‍ಎಫ್‍ಐ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಈ ವೇಳೆ ಎಸ್‍ಎಫ್‍ಐ ವಿದ್ಯಾರ್ಥಿಗಳು ಪೊಲೀಸರನ್ನು ಧಿಕ್ಕರಿಸಿ ಸಂಸದ ಕಚೇರಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಈ ಗಲಾಟೆಯಲ್ಲಿ ಸಂಸದರ ಕಚೇರಿ ಸಿಬ್ಬಂದಿ ಆಗಸ್ಟಿನ್ ಸಹ ಗಾಯಗೊಂಡಿದ್ದರು.