– ಮೋದಿ ಛತ್ ಪೂಜೆಗಾಗಿ ದೆಹಲಿಯಲ್ಲಿ ನಕಲಿ ಯಮುನೆಯ ಸೃಷ್ಟಿ ಮಾಡಿದ್ರು
– ಚುನಾವಣಾ ಆಯೋಗದೊಂದಿಗೆ ಬಿಜೆಪಿ ಒಳಒಪ್ಪಂದ; ರಾಗಾ ಆರೋಪ
ನವದೆಹಲಿ: ಮೋದಿ (Narendra Modi) ಮತಕ್ಕಾಗಿ ಡ್ಯಾನ್ಸು, ಡ್ರಾಮಾ ಮಾಡ್ತಾರೆ, ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ ಅಂತ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಲೇವಡಿ ಮಾಡಿದರು.
Rahul Gandhi speaks like a “Local Goon”
Rahul Gandhi has openly insulted every poor of India, & Bihar who has voted for PM @narendramodi ji!
Rahul Gandhi has mocked voters, and Indian democracy! pic.twitter.com/qRDfDXdBJP
— Pradeep Bhandari(प्रदीप भंडारी)🇮🇳 (@pradip103) October 29, 2025
ಬಿಹಾರ ಚುನಾವಣೆಗೆ (Bihar Elections 2025) ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ಪಕ್ಷಗಳು ಬಿರುಸಿನ ಪ್ರವಾರ ಆರಂಭಿಸಿವೆ. ಈ ನಿಟ್ಟಿನಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ವತಿಯಿಂದ ಇಂದು 2 ಕಡೆ ಆಯೋಜಿಸಿದ್ದ ರ‍್ಯಾಲಿಯಲ್ಲಿ (Bihar Rally) ನಾಯಕ ರಾಹುಲ್ ಗಾಂಧಿ ಪಾಲ್ಗೊಂಡು ಬಿರುಸಿನ ಪ್ರಚಾರ ನಡೆಸಿದ್ದಾರೆ. ಅಲ್ಲದೇ ಮುಜಾಫರ್‌ಪುರದಲ್ಲಿ ನಡೆದ ಜಂಟಿ ರ‍್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ವಿರುದ್ಧ ಲೇವಡಿ ಮಾಡಿದ್ದಾರೆ. ಮೋದಿ ಅವರು ಚುನಾವಣೆ ಗೆಲ್ಲಲು ಏನ್ ಬೇಕಾದ್ರೂ ಮಾಡ್ತಾರೆ ಅಂತ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: 10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ
LIVE: Joint Public Meeting | Darbhanga, Bihar https://t.co/Bfp6zWLR6M
— Rahul Gandhi (@RahulGandhi) October 29, 2025
ಮೋದಿಗೆ ನಿಮ್ಮ ಮತ ಬೇಕಾಗಿದೆ, ಅದಕ್ಕಾಗಿ ನೀವು ಸ್ಟೇಜ್ ಮೇಲೆ ಕುಣೀರಿ ಅಂದ್ರೂ ಕುಣೀತಾರೆ. ಭರತನಾಟ್ಯ ಕೂಡ ಮಾಡ್ತಾರೆ ಅಂತ ತಿವಿದರು. ಇದನ್ನೂ ಓದಿ: ʻನನ್ನ ಸಾವಿಗೆ ಸಚಿವ ಜಮೀರ್ ಕಾರಣʼ – ರಕ್ತದಲ್ಲಿ ಡೆತ್‌ನೋಟ್ ಬರೆದು ಹೈಡ್ರಾಮಾ!
ಬಿಹಾರದ ಅತಿ ದೊಡ್ಡ ಹಬ್ಬವಾದ ಛತ್ ಪೂಜೆಯನ್ನು ಉಲ್ಲೇಖಿಸಿ, ದೆಹಲಿಯಲ್ಲಿ ಮಾಲಿನ್ಯಗೊಂಡ ಯಮುನಾ ನದಿಯಲ್ಲಿ ಭಕ್ತರು ಪೂಜೆ ಮಾಡುತ್ತಿದ್ದಾಗ, ಪ್ರಧಾನಿ ಅವರು ವಿಶೇಷವಾಗಿ ನಿರ್ಮಿಸಿದ ಕೊಳದಲ್ಲಿ ಸ್ನಾನ ಮಾಡಿದ್ದಾರೆ. ನರೇಂದ್ರ ಮೋದಿ ತಮ್ಮ ಈಜುಕೊಳದಲ್ಲಿ ಸ್ನಾನ ಮಾಡಲು ಹೋದರು. ಯಮುನಾ ನದಿಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಛತ್ ಪೂಜೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಬೇಕಾಗಿರುವುದು ನಿಮ್ಮ ಮತ ಮಾತ್ರ. ಅದಕ್ಕಾಗಿ ದೆಹಲಿಯಲ್ಲಿ ನಕಲಿ ಯಮುನೆಯ ಸೃಷ್ಟಿ ಮಾಡಿದ್ರು ಅಂತ ಆರೋಪ ಮಾಡಿದ್ರು.
LIVE: Joint Public Meeting | Sakra, Bihar https://t.co/AQyTFKNzLF
— Rahul Gandhi (@RahulGandhi) October 29, 2025
ಚುನಾವಣಾ ಆಯೋಗದೊಂದಿಗೆ ಒಳಒಪ್ಪಂದ:
ಮುಂದುವರಿದು… ಬಿಜೆಪಿ ಮತದಾರರಿಗೆ ವಂಚನೆ ಮಾಡಲು ಹಾಗೂ ರಾಜ್ಯ ಚುನಾವಣೆಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಚುನಾವಣಾ ಯೋಗದೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಮತಗಳನ್ನ ಕದ್ದರು, ಹರಿಯಾಣದಲ್ಲಿ ಮತ ಕದ್ದರು ಈಗ ಬಿಹಾರದಲ್ಲಿ ಮತಗಳನ್ನ ಕದಿಯಲು ತಮ್ಮ ಕೈಲಾದಷ್ಟು ಪ್ರಯತ್ನ ಪಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಹಣೆಯಲ್ಲಿ ಬರೆದಿದ್ದರೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ, ಇಲ್ಲದಿದ್ದರೆ ಇಲ್ಲ: ಡಿ.ಕೆ.ಸುರೇಶ್

