– ಉಗ್ರರನ್ನು ಸದೆಬಡಿಯಲು ಕೇಂದ್ರ ಬೇಕಾದ್ದು ಮಾಡಲಿ ನಮ್ಮ ಬೆಂಬಲವಿದೆ; ರಾಗಾ
ಶ್ರೀನಗರ: ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ ಮೂರು ದಿನಗಳ ಬಳಿಕ ಪಹಲ್ಗಾಮ್‌ಗೆ (Pahalgam) ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿದ್ದಾರೆ. ಈ ವೇಳೆ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿ, ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ದಾಳಿಯ ಕುರಿತ ವಿವರಗಳನ್ನು ಪಡೆದ್ದಾರೆ.
पहलगाम में हुआ दुस्साहसी आतंकी हमला एक भयावह त्रासदी है।
मैं यहां के हालात को समझने और मदद करने आया हूं। जम्मू-कश्मीर के सभी लोगों ने इस भयावह हमले की निंदा की है और पूरी तरह से देश का समर्थन किया है। मैंने घायल हुए एक व्यक्ति से मुलाक़ात की। जिन लोगों ने अपने परिजनों को खोया… pic.twitter.com/wjqhsRjnx2
— Rahul Gandhi (@RahulGandhi) April 25, 2025
ಗಾಯಾಳುಗಳ ಭೇಟಿಯ ಬಳಿಕ ಮಾತನಾಡಿದ ಅವರು, ಉಗ್ರರ ಈ ದಾಳಿಯ ಹಿಂದಿನ ಉದ್ದೇಶ ಸಮಾಜವನ್ನು ವಿಭಜಿಸುವುದು. ಇದು ಒಂದು ಭಯಾನಕ ದುರಂತ. ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಹಾಗೂ ದಾಳಿಯ ಕುರಿತ ಮಾಹಿತಿ ಪಡೆಯಲು ಆಗಮಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಒಬ್ಬ ಪಾಕಿಸ್ತಾನಿ ಪ್ರಜೆಯೂ ಭಾರತದಲ್ಲಿ ಉಳಿಯಬಾರದು – ರಾಜ್ಯಗಳಿಗೆ ಅಮಿತ್ ಶಾ ನಿರ್ದೇಶನ
ಜಮ್ಮು ಮತ್ತು ಕಾಶ್ಮೀರದ ಜನರು ಹಾಗೂ ಇಡೀ ರಾಷ್ಟ್ರವೇ ಈ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಈ ಸಮಯದಲ್ಲಿ ರಾಷ್ಟ್ರವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದ್ದೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಪ್ರೀತಿ, ವಾತ್ಸಲ್ಯವಿದೆ. ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಿದೆ. ನಾವು ಗುರುವಾರ ಸರ್ಕಾರದೊಂದಿಗೆ ಸಭೆ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷವು ಈ ದಾಳಿಯನ್ನು ಖಂಡಿಸಿದೆ ಎಂದರು. ಇದನ್ನೂ ಓದಿ: ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ
ಉಗ್ರರ ವಿರುದ್ಧ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಮ್ಮ ಬೆಂಬಲವಿದೆ. ಸಮಾಜವನ್ನು ವಿಭಜಿಸುವುದೇ ಉಗ್ರರ ಈ ದಾಳಿಯ ಹಿಂದಿನ ಉದ್ದೇಶ. ಉಗ್ರರ ಈ ಪ್ಲ್ಯಾನ್ ವಿಫಲಗೊಳಿಸಲು ಪ್ರತಿಯೊಬ್ಬ ಭಾರತೀಯನೂ ಒಗ್ಗಟ್ಟಿನಿಂದಿರುವುದು ಬಹಳ ಮುಖ್ಯ ಎಂದು ಹೇಳಿದರು. ಇದನ್ನೂ ಓದಿ: ಭಾರತ Vs ಪಾಕಿಸ್ತಾನ – ಭೂಸೇನೆ, ನೌಕಾಸೇನೆ, ವಾಯು ಸೇನೆಯ ಸಾಮರ್ಥ್ಯಗಳ ಬಲಾಬಲ ಎಷ್ಟಿದೆ?
ಕೆಲವರು ಕಾಶ್ಮೀರ ಮತ್ತು ದೇಶದ ಉಳಿದ ಭಾಗಗಳಲ್ಲಿ ನನ್ನ ಸಹೋದರ ಹಾಗೂ ಸಹೋದರಿಯರ ಮೇಲೆ ದಾಳಿ ಮಾಡುವುದನ್ನು ನೋಡಿದರೆ ದುಃಖವಾಗುತ್ತದೆ. ನಾವೆಲ್ಲರೂ ಒಟ್ಟಾಗಿ ನಿಂತು ಇಂತಹ ದುಷ್ಟರ ವಿರುದ್ಧ ಹೋರಾಡಬೇಕು. ಅಲ್ಲದೇ ಭಯೋತ್ಪಾದನೆಯನ್ನು ಶಾಶ್ವತವಾಗಿ ತೊಲಗಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರನ್ನು ಸಹ ಭೇಟಿಯಾದೆ. ದಾಳಿಯ ಮಾಹಿತಿ ಪಡೆದು, ನಾನು ಮತ್ತು ನನ್ನ ಪಕ್ಷ ಸದಾ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನೀಡಿದ್ದೇನೆ ಎಂದರು.