ಅಮೃತಸರ: ಪಂಜಾಬ್‍ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್‍ಗೆ (Golden Temple) ಇಂದು (ಸೋಮವಾರ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ಕೊಟ್ಟಿದ್ದಾರೆ.
Punjab | Congress MP Rahul Gandhi offered 'Sewa' at the Golden Temple in Amritsar.
(Source Congress) pic.twitter.com/7VuK7Tvtbc
— ANI (@ANI) October 2, 2023
ಗೋಲ್ಡನ್ ಟೆಂಪಲ್‍ನಲ್ಲಿ ದೇವರ ದರ್ಶನ ಪಡೆದ ಬಳಿಕ ರಾಹುಲ್ ಗಾಂಧಿಯವರು (Rahul Gandhi) ಕರಸೇವೆಯಲ್ಲಿ ತೊಡಗಿಕೊಂಡರು. ಬಳಿಕ ಕಾಂಗ್ರೆಸ್ ಸದಸ್ಯರು ಹಾಗೂ ಗುರುದ್ವಾರದ ಸ್ವಯಂಸೇವಕರ ಜೊತೆ ತಾವೂ ಪಾತ್ರೆ ತೊಳೆದರು. ಈ ವೇಳೆ ರಾಗಾ ಅವರು ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿರುವುದನ್ನು ಗಮನಿಸಬಹುದಾಗಿದೆ.
ರಾಹುಲ್ ಗಾಂಧಿಯವರು ಇಂದು ರಾತ್ರಿ ನಗರದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ರಾಗಾ ಅವರು ಮಂಗಳವಾರ ಸ್ವರ್ಣ ಮಂದಿರಕ್ಕೆ ಭೇಟಿ ನೀಡುವ ನಿರೀಕೆಷಯಿದ್ದು, ಪಾಲ್ಕಿ ಸೇವೆ ಸಲ್ಲಿಸಲಿದ್ದಾರೆ. ಇದು ಅವರ ಖಾಸಗಿ ಭೇಟಿಯಾಗಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿರಲಿಲ್ಲ.
ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖೈರಾ ಅವರನ್ನು ಕಳೆದ ವಾರ ಪಂಜಾಬ್ ಪೊಲೀಸರು ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಬಂಧಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ನಡುವಿನ ಉದ್ವಿಗ್ನತೆಯ ನಡುವೆ ರಾಹುಲ್ ಗಾಂಧಿ ಅವರ ಅಮೃತಸರ ಭೇಟಿ ಕುತೂಹಲ ಹುಟ್ಟಿಸಿದೆ.
Web Stories