ಪಣಜಿ: ಇಂದು ಕೇರಳ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೋವಾಕ್ಕೆ ಭೇಟಿಕೊಟ್ಟು, ಮೀನುಗಾರರೊಂದಿಗೆ ಮಾತುಕತೆ ನಡೆಸಿದ್ದಾರೆ. ಬರುವ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾದಲ್ಲಿ ಕಾಂಗ್ರೆಸ್ ಪ್ರಚಾರ ಶುರು ಮಾಡಿದೆ.
ದಕ್ಷಿಣ ಗೋವಾದಲ್ಲಿ ಮೀನುಗಾರರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಲ್ಲಿ ಏಕತೆ ಮೂಡಿಸುವಲ್ಲಿ ಮತ್ತು ಎಲ್ಲರನ್ನೂ ಒಟ್ಟಾಗಿ ಮುಂದೆ ಕರೆದುಕೊಂಡು ಹೋಗುವಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ಆದರೆ ಬಿಜೆಪಿ ಜನರ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ. ಸಮುದಾಯಗಳನ್ನು ಇಬ್ಭಾಗ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪ್ರೀತಿಯನ್ನು ಪ್ರಸರಿಸುತ್ತದೆ ಎಂದು ಪಕ್ಷದ ಕುರಿತಾಗಿ ಹೇಳಿದ್ದಾರೆ.
ನಾನು ಬಂದಿರುವುದು ಸಮಯ ವ್ಯರ್ಥ ಮಾಡಲು ಅಲ್ಲ. ನನ್ನ ಸಮಯ ಹಾಳು ಮಾಡಿಕೊಳ್ಳಲೂ ಇಲ್ಲಿಗೆ ಬಂದಿಲ್ಲ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೇವಲ ನಮ್ಮ ಬದ್ಧತೆಯಲ್ಲ. ನಿಶ್ಚಿತವಾಗಿಯೂ ನಡೆಸಿಕೊಡುತ್ತೇವೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನನಗೆ ತುಂಬ ಮುಖ್ಯ. ಉಳಿದ ನಾಯಕರಂತೆ ನಾನೂ ಸಹ ಇರಲು ಸಾಧ್ಯವಿಲ್ಲ. ನಾನೇನಾದರೂ ಹೇಳಿದ್ದೇನೆ ಅಂದರೆ ಅದನ್ನು ಮಾಡುತ್ತೇನೆ ಎಂದಿದ್ದಾರೆ.
ಗೋವಾವವನ್ನು ಕಲ್ಲಿದ್ದಲು ಗಣಿಗಾರಿಕೆ ಹಬ್ ಮಾಡಲು ಅವಕಾಶ ಕೊಡುವುದಿಲ್ಲ. ಅದಕ್ಕೆ ನೀವು ಸಹಕರಿಸಬೇಕು. ನಾನೀಗ ಹೇಳಿದ್ದನ್ನು ಮಾಡುತ್ತೇನೆ. ಇಲ್ಲದೆ ಇದ್ದರೆ ನಾನು ಮುಂದೆ ಇನ್ನೊಮ್ಮೆ ಬರುವಷ್ಟರಲ್ಲಿ ನೀವೆಲ್ಲ ನನ್ನ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿರುತ್ತೀರಿ. ಈ ಮೂಲಕ ನೈಋತ್ಯ ರೈಲ್ವೆ ಹಳಿಯನ್ನು ಡಬಲ್ ಮಾಡುವ ಯೋಜನೆಯನ್ನು ವಿರೋಧಿಸುತ್ತಿರುವ ಅಲ್ಲಿನ ಮೀನುಗಾರರಿಗೆ ಬೆಂಬಲಕ್ಕೆ ನೀಡುವ ಭರವಸೆಯನ್ನು ರಾಹುಲ್ ಗಾಂಧಿ ಕೊಟ್ಟಿದ್ದಾರೆ. ಈ ಯೋಜನೆಯನ್ನು ಮೀನುಗಾರರು ತೀವ್ರವಾಗಿ ವಿರೋಧಿಸುತ್ತಿದ್ದು, ಪ್ರಸ್ತುತ ಯೋಜನೆಯಿಂದ ಗೋವಾವನ್ನು ಕಲ್ಲಿದ್ದಲು ಹಬ್ ಆಗಿ ಪರಿವರ್ತಿಸುವ ಪ್ರಯತ್ನ ನಡೆಯುತ್ತಿದೆ ಎಮದು ಕಡಿಕಾರಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ