ಬಾಗಲಕೋಟೆ: ಭಾರತದಲ್ಲಿ ಪ್ರಜಾಪ್ರಭುತ್ವದ (Democracy) ತಳಹದಿಯನ್ನು ಬಸವಣ್ಣನವರ (Basavanna) ಚಿಂತನೆಗಳು ಸದೃಢಗೊಳಿಸಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅಭಿಪ್ರಾಯಪಟ್ಟಿದ್ದಾರೆ.
ಕೂಡಲಸಂಗಮದಲ್ಲಿ (Kudala Sangama) ಭಾನುವಾರ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಬರಲು ಬಸವಣ್ಣನವರ ಅನುಭವ ಮಂಟಪ ಕಾರಣವಾಗಿದೆ. ಎಲ್ಲಿ ಕತ್ತಲಿದೆಯೋ ಅಲ್ಲೇ ಒಂದು ಕಡೆ ಬೆಳಕಿರುತ್ತದೆ. ಹಾಗೆಯೇ ಕತ್ತಲು ತುಂಬಿದ ಸಮಾಜಕ್ಕೆ ಬೆಳಕು ನೀಡಿದ ಬಸವಣ್ಣ ಎಲ್ಲಾ ಕಾಲಕ್ಕೂ ದಾರಿದೀಪವಾಗಿದ್ದಾರೆ. ಅವರ ಜಯಂತಿಯ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಮೇಲಿನ ಆರೋಪ ಇಡೀ ಕುರುಬ ಸಮಾಜಕ್ಕೆ ಮಾಡ್ತಿರೋ ಅವಮಾನವಲ್ಲವೇ – ಕಾಂಗ್ರೆಸ್ ಪ್ರಶ್ನೆ
ಬಸವಣ್ಣನವರು ತಮ್ಮನ್ನ ತಾವು ಪ್ರಶ್ನೆ ಮಾಡಿಕೊಳ್ಳುತ್ತಿದ್ದರು. ಇದರಿಂದ ತಾವು ಶುದ್ಧರಾಗುತ್ತಿದ್ದರು. ಇದರಿಂದ ಬೇರೆಯವರ ಶುದ್ಧತೆ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ಬಸವಣ್ಣನವರು ಕೇವಲ ಎಂಟು ವರ್ಷಕ್ಕೆ ಜನಿವಾರ ನಿರಾಕರಣೆ ಮಾಡಿದರು. ಅಷ್ಟು ಚಿಕ್ಕ ವಯಸ್ಸಿಗೆ ಹೇಗೆ ಇಂತಹ ಯೋಚನೆ ಅವರಲ್ಲಿ ಬಂತು ಎಂದು ನಾನು ಸ್ವಾಮೀಜಿಯವರಲ್ಲಿ ಕೇಳಿದೆ. ಅದಕ್ಕೆ ಸ್ವಾಮೀಜಿ ಜಾತಿ ಪ್ರಭುತ್ವ ಹಾಗೂ ಸಮಾಜದ ಬಗ್ಗೆ ತಮ್ಮೊಳಗೆ ಪ್ರಶ್ನಿಸಿಕೊಂಡು ಆಲೋಚಿಸುತ್ತಿದ್ದರು. ಇದರಿಂದ ಸತ್ಯವನ್ನು ತಿಳಿದುಕೊಳ್ಳುತ್ತಿದ್ದರು ಎಂದರು. ಅಲ್ಲದೇ ನನಗೆ ಅರ್ಥ ಆಗುವಂತೆ ಹಿಂದಿಯಲ್ಲೇ ಮಾತನಾಡಿದ ಸ್ವಾಮೀಜಿಯವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಆದರೆ ಇಂದು ಬಹಳಷ್ಟು ಜನ ಸತ್ಯವನ್ನ ತಿಳಿದುಕೊಳ್ಳುತ್ತಾರೆ. ಸಮಾಜದ ಮುಂದೆ ಮಾತನಾಡಲು ಹೆದರಿಕೊಳ್ತಾರೆ. ಬಸವಣ್ಣನವರು ಇದ್ದಾಗ ಅವರನ್ನು ಹೆದರಿಸುವ ಹಾಗೂ ಸಮಸ್ಯೆ ನೀಡುವ ಕೆಲಸಗಳು ನಡೆದಿದ್ದವು. ಆದರೂ ಬಸವಣ್ಣನವರು ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿದ್ದಾರೆ. ನಾನು ಹಿಂದಿನಿಂದಲೂ ಬಸವಣ್ಣನವರ ಸಿದ್ಧಾಂತಗಳನ್ನು ಓದಿದ್ದೇನೆ. ಅವರು ಸತ್ಯದ ದಾರಿಯಲ್ಲಿ ನಡೆಯಿರಿ ಎಂದು ಸಮಾಜಕ್ಕೆ ಸಂದೇಶ ಕೊಟ್ಟವರು ಎಂದಿದ್ದಾರೆ. ಇದನ್ನೂ ಓದಿ: ಸುಡಾನ್ ಹಿಂಸಾಚಾರ – ವಿಮಾನ ನಿಲ್ದಾಣಗಳ ಸ್ಥಗಿತ; ಪ್ರಜೆಗಳನ್ನು ಕರೆತರಲು ಭೂಮಾರ್ಗ ಹುಡುಕಾಟದಲ್ಲಿ ಭಾರತ