ನವದೆಹಲಿ: ಲೋಕಸಭಾ ಚುನಾವಣೆ ಮುಗಿಯಲು ಮೂರು ದಿನ ಮಾತ್ರ ಬಾಕಿಯಿದೆ. ಇದೇ ಸಂದರ್ಭದಲ್ಲಿ ನಾಯಕರ ವಾಗ್ದಾಳಿ ಜೋರಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಲು ರಾಹುಲ್ ಗಾಂಧಿ ಹೊಸ ಪದಗಳ ಪ್ರಯೋಗವನ್ನು ಮಾಡಿದ್ದು, ಇದೇ ಸಂದರ್ಭದಲ್ಲಿ ರಾಹುಲ್ ಬಳಸಿದ್ದ ಪದ ನಮ್ಮ ಡಿಕ್ಷನರಿಯಲ್ಲಿ ಇಲ್ಲ ಎಂದು ಆಕ್ಸ್‌ಫರ್ಡ್ ಪ್ರತಿಕ್ರಿಯೆ ನೀಡಿದೆ.
ಪ್ರಧಾನಿ ಮೋದಿ ವಿರುದ್ಧ ಟ್ವಿಟ್ಟರ್ ನಲ್ಲಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿವ ರಾಹುಲ್ ಗಾಂಧಿ, ಬುಧವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಕ್ರೀನ್ ಶಾಟ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ‘Modilie’ ಎಂಬ ಪದದ ಅರ್ಥ ‘ಸುಳ್ಳು ಹೇಳುವುದು’ ಎಂದು ವಿವರಣೆ ನೀಡಲಾಗಿತ್ತು.
Advertisement
There’s a new word in the English Dictionary. Attached is a snapshot of the entry 🙂 pic.twitter.com/xdBdEUL48r
— Rahul Gandhi (@RahulGandhi) May 15, 2019
Advertisement
‘Modilie’ ಎಂಬ ಪದ ಹೊಸದಾಗಿ ಡಿಕ್ಷನರಿಗೆ ಸೇರಿದೆ. ಇದರ ಅರ್ಥ ಏನೆಂದು ನೀವೇ ನೋಡಿ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಈ ಫೋಟೋ ಅನ್ವಯ ‘Modilie’ ಎಂದರೆ ‘ಸತ್ಯವನ್ನು ತಿರುಚುವುದು’ ಎಂಬ ವಿವರಣೆಯನ್ನು ಒಳಗೊಂಡಿತ್ತು. ಈ ಫೋಟೋವನ್ನು ಬಳಿಸಿಕೊಂಡು ರಾಹುಲ್ ಗಾಂಧಿ, ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಆಶ್ವಾಸನೆಗಳನ್ನ ನೀಡುತ್ತಾ ಬಂದಿದ್ದಾರೆ ಎಂದು ಟೀಕಿಸಿದ್ದರು.
Advertisement
We can confirm that the image showing the entry ‘Modilie’ is fake and does not exist in any of our Oxford Dictionaries.
— Oxford Dictionaries (@OxfordWords) May 16, 2019
Advertisement
ರಾಹುಲ್‍ರ ಟ್ವೀಟ್‍ಗೆ ಸ್ವತಃ ಆಕ್ಸ್‌ಫರ್ಡ್ ಡಿಕ್ಷನರಿ ಪ್ರತಿಕ್ರಿಯೆ ನೀಡಿದ್ದು, ಇಂತಹ ಪದವೇ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಆ ಮೂಲಕ ರಾಹುಲ್ ಹಂಚಿಕೊಂಡಿರುವ ಫೋಟೋ ಶಾಪ್ ಮಾಡಿದ ಸ್ಕ್ರೀನ್ ಶಾಟ್ ಆಗಿದೆ ಎಂಬುವುದು ಸ್ಪಷ್ಟವಾಗಿದೆ.
ಇತ್ತ ಆಕ್ಸ್‌ಫರ್ಡ್ ಸ್ಪಷ್ಟನೆ ನೀಡುತ್ತಿದಂತೆ ರಾಹುಲ್ ಗಾಂಧಿ ಅವರ ಟ್ವೀಟ್‍ಗೆ ಹಲವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ರಾಹುಲ್ ಅವರ ಈ ಟ್ವೀಟನ್ನು ಇದುವರೆಗೂ 9 ಸಾವಿರ ಮಂದಿ ರೀ ಟ್ವೀಟ್ ಮಾಡಿದ್ದು, 34 ಸಾವಿರ ಮಂದಿ ಲೈಕ್ ಮಾಡಿದ್ದಾರೆ.