ಬೆಂಗಳೂರು: ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿ (Rahul Gandhi) ಅವರು ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ (BMTC Bus) ಸಾಮಾನ್ಯ ನಾಗರಿಕರಂತೆ ಸೋಮವಾರ ಸಂಚರಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ 2 ದಿನಗಳು ಬಾಕಿಯಿದೆ. ಇಂದು ಸಂಜೆ ಚುನಾವನಾ (Election) ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಿವಿಧ ಪಕ್ಷದ ನಾಯಕರು ಗೆಲುವು ಸಾಧಿಸಲು ವಿವಿಧ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಈ ಮಧ್ಯೆ ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಅವರು ಬಿಎಂಟಿಸಿ ಬಸ್‍ನಲ್ಲಿ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Advertisement
Advertisement
ಕನ್ನಿಂಗ್ ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರ ಕಡೆ ಹೋಗುತ್ತಿದ್ದ ಬಸ್‌ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಪ್ರಯಾಣಿಕರ ಜೊತೆ ಸಂವಾದ ನಡೆಸುತ್ತಲೇ ಸಾರ್ವಜನಿಕರಂತೆ ಬಸ್‍ನಲ್ಲಿ ಪ್ರಯಾಣಿಸಿದರು. ಸುಮಾರು 6 ಕಿಮೀಗೂ ಹೆಚ್ಚು ದೂರ ಬಸ್‍ನಲ್ಲೇ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಜೊತೆ ರಾಹುಲ್ ಗಾಂಧಿ ಬೈಕ್ ರೈಡ್
Advertisement
Advertisement
ಭಾನುವಾರ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸಂಚಾರಿಸಿದ್ದರು. ಅದಾದ ಬಳಿಕ ಡೆಲಿವರಿ ಬಾಯ್ ಜೊತೆ ಹೋಟೆಲ್‌ವೊಂದರಲ್ಲಿ ಸಂವಾದ ನಡೆಸಿ, ಅವರಿಗಾಗುವ ತೊಂದರೆಗಳ ಕುರಿತು ಚರ್ಚೆ ನಡೆಸಿದ್ದರು. ಇದನ್ನೂ ಓದಿ: ಬ್ರಿಜ್‌ಭೂಷಣ್ ಬಂಧನಕ್ಕೆ ಮೇ 21 ಗಡುವು ನೀಡಿದ ಕುಸ್ತಿಪಟುಗಳು