ಹಾಸನ: ಜೆಡಿಎಸ್‍ನ ಭದ್ರ ಕೋಟೆಯಾಗಿರುವ ಮೈಸೂರು ವಿಭಾಗದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ ಕೊನೆಯ ವಾರದಲ್ಲಿ ಪ್ರವಾಸ ಮಾಡಲಿದ್ದಾರೆ.
ಮಾರ್ಚ್ 20, 21 ಮತ್ತು 22 ಮೂರು ದಿನಗಳ ಕಾಲ ಮೈಸೂರು ವಿಭಾಗದಲ್ಲಿ ಪ್ರವಾಸ ಮಾಡಲಿದ್ದಾರೆ. ಆದರೆ ಈ ದಿನಾಂಕವನ್ನು ಕೆಪಿಸಿಸಿ ಅಂತಿಮಗೊಳಿಸಿದ್ದರೂ ರಾಹುಲ್ ಗಾಂಧಿ ಅಂತಿಮಗೊಳಿಸಿಲ್ಲ. ಬಹತೇಕ ಈ ದಿನವೇ ಅಂತಿಮವಾಗುವ ಸಾಧ್ಯತೆಯಿದೆ.
Advertisement
Advertisement
ಹಾಸನದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್ ಮಾತನಾಡಿ, ಮೈಸೂರು ವಿಭಾಗದಲ್ಲಿ ಜನಾಶಿರ್ವಾದ ಯಾತ್ರೆ ನಡೆಸಲಿರುವ ರಾಹುಲ್. ಹಾಸನಕ್ಕೂ ಆಗಮಿಸುತ್ತಾರೆ. ಅವರು ಮೂರು ದಿನಗಳಲ್ಲಿ ಸುಮಾರು 10 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದು ತಿಳಿಸಿದರು.
Advertisement
ರಾಹುಲ್ ಅವರು ಪ್ರವಾಸ ವೇಳೆ ದೇವಾಲಯ, ಚರ್ಚ್, ಮತ್ತು ಮಸೀದಿಗಳಿಗೆ ಭೇಟಿ ನೀಡುತ್ತಾರೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ಮತ್ತು ರೈತರೊಂದಿಗೆ ಸಂವಾದ ನಡೆಸುವ ಬಗ್ಗೆಯು ಕೂಡ ನಾಯಕರು ಚಿಂತನೆ ನಡೆಸಿದ್ದು, ಹಾಸನದಲ್ಲಿ ರಾಹುಲ್ ಓಡಾಟ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
Advertisement