ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೊರೊನಾ ಸೋಂಕಿನ ಕುರಿತಾಗಿ ಕೇಂದ್ರ ಸರ್ಕಾರ ನೀಡುತ್ತಿರುವ ಮಾಹಿತಿಯ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಕಾಂಗ್ರೆಸ್ ಪಕ್ಷದ ಎರಡು ಬೇಡಿಕೆಗಳಿವೆ ಎಂದು ಹೇಳಿದ್ದಾರೆ. ಒಂದನೇಯದು, ಕೊರೊನಾದಿಂದ ಮೃತಪಟ್ಟವರ ನೈಜವಾದ ಅಂಕಿ-ಸಂಖ್ಯೆಯನ್ನುತಿಳಿಸಬೇಕು. ಎರಡನೇದಾಗಿ ಕೊರೊನಾದಿಂದ ಮೃತರಾದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಸರ್ಕಾರ ರಚಿಸಿದರೆ ಸಾಕಾಗದು, ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗೇ ಒಂದು ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
कांग्रेस पार्टी की दो माँग हैं-
1. कोविड मृतकों के सही आँकड़े बताए जायें।
2. अपने प्रियजनों को कोविड में खो चुके परिवारों को चार लाख हरजाना दिया जाए।
सरकार हो तो जनता का दुख दूर करना होगा,
हरजाना मिलना चाहिए, #4LakhDenaHoga pic.twitter.com/aEPO7XVxyJ
— Rahul Gandhi (@RahulGandhi) November 24, 2021
ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಯೆಂಬುದು ಇತರ ರಾಜ್ಯಗಳಿಗೆ ಮಾನದಂಡವಾಗಬೇಕು ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಕೋವಿಡ್‍ನಿಂದ ತತ್ತರಿಸುತ್ತಿರುವ ಜನರು ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲದೆ ಪರದಾಡುತ್ತಿದ್ದಾಗ ನೀವ್ಯಾರೂ ಸಹಾಯಕ್ಕೆ ಬಂದಿಲ್ಲ. ಜನರು ತಮ್ಮ ಪ್ರೀತಿಪಾತ್ರರಿಗೆ ಚಿಕಿತ್ಸೆ ಕೊಡಿಸಲು 10-15 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿ ಬಂದಾಗಲೂ ನೀವು ನೆರವು ನೀಡಲಿಲ್ಲ. ಇದೀಗ ಮೃತರ ಕುಟುಂಬಕ್ಕೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಲೂ ಮುಂದಾಗುತ್ತಿಲ್ಲ. ನಿಮ್ಮದು ಇದ್ಯಾವ ಮಾದರಿಯ ಸರ್ಕಾರ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ತಾಯಿಯಾಗ್ತಿದ್ದಾರಾ ಪ್ರಿಯಾಂಕಾ ಚೋಪ್ರಾ?
ಕೊರೊನಾ ಮಹಾಮಾರಿ ಹಲವರ ಬಾಳನ್ನು ಕತ್ತಲಿಗೆ ನೂಕಿದೆ. ಕೊರೊನಾ ಸುಳಿಗೆ ಸಿಕ್ಕು ಆಗಿರುವ ನಷ್ಟವನ್ನು ತುಂಬಿಸಿಕೊಳ್ಳಲು ಜನರು ಪರಿತಪ್ಪಿಸುತ್ತಿದ್ದಾರೆ. ಕೊರೊನಾ ಲಸಿಕೆಯನ್ನು ಪಡೆದುಕೊಳ್ಳುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.