ವಿಜಯಪುರ: ರಾಜ್ಯದ ಮತದಾರರ ಮನಗೆಲ್ಲಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡನೇ ಬಾರಿ ಜನಾಶೀರ್ವಾದ ಯಾತ್ರೆಯನ್ನು ಕೈಗೊಂಡಿದ್ದಾರೆ. ಈ ವೇಳೆ ಬಸವವಣ್ಣರ ಮಾತನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಥಣಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿ ವೋಟ್‍ಗಾಗಿ ಬಸವಣ್ಣನವರ ಹೆಸ್ರನ್ನು ಬಳಸ್ತಾರೆ. ಆದ್ರೆ ಬಸವಣ್ಣನವರ ನುಡಿದಂತೆ ನಡೆಯಬೇಕು ಎಂಬ ವಚನವನ್ನು ಪಾಲಿಸಿದ್ದಾರೆಯೇ? ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕ್ತೀನಿ ಅಂದಿದ್ರು. ಒಂದು ವರ್ಷದಲ್ಲಿ 2 ಕೋಟಿ ಮಂದಿಗೆ ಉದ್ಯೋಗ ಕೊಡಿಸ್ತೀನಿ ಅಂದಿದ್ರು. ಭ್ರಷ್ಟಾಚಾರದ ವಿರುದ್ಧ ಹೋರಾಡ್ತಿನಿ ಅಂತಾ ಹೇಳಿದ್ರು. ಆದ್ರೆ ಏನಾಯ್ತು? ಎಲ್ಲವೂ ಬರೀ ಮಾತಲ್ಲಿಯೇ ಉಳಿಯಿತು. ಮೋದಿ ಹೇಳೊದನ್ನು ಮಾಡಲ್ಲ ಎಂದು ರಣಕಹಳೆ ಮೊಳಗಿಸದ್ರು.
ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ… ಎಂಬ ವಚನವನ್ನು ಮೋದಿ ಪಾಲಿಸ್ತಿಲ್ಲ. ಮೋದಿ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಅಂತಾ ರಾಹುಲ್ ದೂರಿದ್ರು. ಇಷ್ಟಕ್ಕೆ ಸುಮ್ಮನಾಗದ ರಾಹುಲ್, ಹೋದಲ್ಲಿ ಬಂದಲ್ಲಿ ರಾಜ್ಯ ಸರ್ಕಾರ ಭ್ರಷ್ಟ ಅಂತಾರೆ. ಆದ್ರೆ, ಜೈಲಿಗೆ ಹೋಗಿ ಬಂದ ಬಿಎಸ್‍ವೈ ಬಗ್ಗೆ ಏನು ಮಾತಾಡಲ್ಲ ಅಂತಾ ಟೀಕಿಸಿದ್ರು.
ಅಥಣಿಯಿಂದ ನೇರ ಬಬಲೇಶ್ವರದ ತಿಕೋಟಾಗೆ ಬಂದ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ, ಬೃಹತ್ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡರು. ರಾಹುಲ್ ಗಾಂಧಿಗೆ ಏಲಕ್ಕಿ ಮಾಲೆ ಹಾಕಿ ವಿಭೂತಿ ಬಳಿದು, ಬಸವಣ್ಣನ ಪ್ರತಿಮೆ ಕೊಟ್ಟು ಸಚಿವ ಎಂಬಿ ಪಾಟೀಲ್ ಸನ್ಮಾನಿಸಿದ್ರು. ಬಳಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್, ಇಲ್ಲೂ ಬಸವಣ್ಣ, ಅಕ್ಕಮಹಾದೇವಿ, ರಾಣಿ ಚೆನ್ನಮ್ಮರನ್ನು ಸ್ಮರಿಸಿದ್ರು. ಸಿದ್ದರಾಮಯ್ಯ ಸರ್ಕಾರ, ಮಹಿಳೆಯರಿಗಾಗಿ ರೂಪಿಸಿದ ಯೋಜನೆಗಳನ್ನು ಹೊಗಳಿದ್ರು. ರೈತರ ಸಾಲ ಮನ್ನಾ ಮಾಡ್ತೀರಾ ಮೋದಿ ಎಂದಿದ್ದಕ್ಕೆ ಅವರು ಉತ್ತರಿಸಲೇ ಇಲ್ಲ. ನಂತ್ರ ಸಿದ್ದರಾಮಯ್ಯರನ್ನು ಇದೇ ಪ್ರಶ್ನೆ ಕೇಳಿದೆ, ಅವರು ರೈತರ ಸಾಲ ಮನ್ನಾ ಮಾಡಿದ್ರು. ಇದೇ ಮೋದಿಗೂ ಸಿದ್ದರಾಮಯ್ಯಗೂ ಇರೋ ವ್ಯತ್ಯಾಸ ಅಂತಾ ವಿಶ್ಲೇಷಣೆ ಮಾಡಿದ್ರು.
https://www.youtube.com/watch?v=Wm34xGZ97Kw
https://www.youtube.com/watch?v=JSm4g5z6XAA