– ಅಪರಾಧ ಸಾಬೀತಾದರೆ 2 ವರ್ಷ ಜೈಲು ಶಿಕ್ಷೆ ವಿಧಿಸಬಹುದು – ವಕೀಲ ಸಂತೋಷ್ ಪಾಂಡೆ
ಲಕ್ನೋ: 2019ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ʻಮೋದಿ ಉಪನಾಮʼ ಬಳಸಿ ಟೀಕಿಸಿ ಸಂಕಷ್ಟಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2018ರಲ್ಲಿ ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸುಲ್ತಾನ್‌ಪುರದ MP/MLA ಕೋರ್ಟ್ (MP-MLA Court) ಸಮನ್ಸ್ (Court Summoned) ಜಾರಿಗೊಳಿಸಿದೆ.
ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ತಿಳಿಸಿರುವುದಾಗಿ ವಕೀಲರಾದ ವಕೀಲ ಸಂತೋಷ್ ಪಾಂಡೆ ಖಚಿತಪಡಿಸಿದ್ದಾರೆ. 2018ರ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಆರಂಭದಲ್ಲೇ ಸಮನ್ಸ್ ನೀಡಿತ್ತು. ಆದ್ರೆ ಅವರು ಹಾಜರಾಗದ ಕಾರಣ 2ನೇ ಬಾರಿಗೆ ಸಮನ್ಸ್ ಜಾರಿಗೊಳಿಸಿರುವುದಾಗಿ ವಕೀಲರು ಹೇಳಿದ್ದಾರೆ.
Advertisement
Advertisement
ರಾಗಾ ಹೇಳಿದ್ದೇನು?
2018ರ ಪತ್ರಿಕಾಗೋಷ್ಠಿಯೊಂದರಲ್ಲಿ ರಾಹುಲ್ ಗಾಂಧಿ ಅವರು ಮಾತನಾಡುತ್ತಿದಾಗ, ಬಿಜೆಪಿ ಅಧ್ಯಕ್ಷ ಕೊಲೆ ಆರೋಪಿ ಎಂಬುದನ್ನು ದೇಶದ ಜನ ಮರೆತುಬಿಡುತ್ತಾರೆ, ಆದ್ರೆ ಅದೇ ಸತ್ಯ. ಸದಾ ಪ್ರಾಮಾಣಿಕತೆ ಮತ್ತು ಸಭ್ಯತೆಯ ಬಗ್ಗೆ ಮಾತನಾಡುವ ಪಕ್ಷವು ಕೊಲೆ ಆರೋಪ ಹೊತ್ತ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡುತ್ತದೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ಪೆಂಟಗನ್ ಮೀರಿಸುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ʻಸೂರತ್ ಡೈಮಂಡ್ ಬೋರ್ಸ್ʼ – ಭಾನುವಾರ ಪ್ರಧಾನಿ ಮೋದಿಯಿಂದ ಉದ್ಘಾಟನೆ
Advertisement
2005 ರಲ್ಲಿ ಸೊಹ್ರಾಬುದ್ದೀನ್ ಶೇಖ್ ಎಂಬ ಕ್ರಿಮಿನಲ್ ಹತ್ಯೆಯಲ್ಲಿ ಅಮಿತ್ ಶಾ (Amit Shah) ಅವರ ಪಾತ್ರದ ಆರೋಪದ ಬಗ್ಗೆ ಮಾತನಾಡಿದ್ದ ರಾಗಾ, ಅಮಿತ್ ಶಾ ಅವರ ಮೇಲೆ ಕೊಲೆ ಆರೋಪ ಇದೇ ಅಲ್ಲವೇ? ಹಾಗಾಗಿ ಅಮಿತ್ ಶಾ ಅವರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಇದೆ ಎಂದು ನಾನು ಭಾವಿಸುವುದಿಲ್ಲ. ಈತ ಯಾವ ರೀತಿ ರಾಜಕೀಯ ಮಾಡ್ತಾನೋ ನೋಡೋಣ, ಕೊಲೆ ಆರೋಪಿ ಅನ್ನೋದನ್ನ ಮರೆಯಬೇಡಿ ಎಂದು ವಾಗ್ದಾಳಿ ನಡೆಸಿದ್ದರು.
Advertisement
ಈ ಹೇಳಿಕೆ ಬಳಿಕ ಅಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿದ್ದ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಅಮಿತ್ ಶಾ ಅವರನ್ನು ಕೊಲೆಗಾರ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಆರೋಪಗಳನ್ನು ಕೇಳಿ ನನಗೆ ನೋವಾಯಿತು ಎಂದು ಹೇಳಿ ವಕೀಲರ ಮೂಲಕ ಕೇಸ್ ದಾಖಲಿಸಿದ್ದರು. ಇದು 5 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್ ಸ್ಪಷ್ಟನೆ
2 ವರ್ಷ ಜೈಲು ಶಿಕ್ಷೆ ವಿಧಿಸಬಹುದು:
ಪ್ರಕರಣದ ಕುರಿತು ಕಾನೂನು ಪರಿಣಾಮಗಳನ್ನು ವಿವರಿಸಿದ ವಕೀಲ ಸಂತೋಷ್ ಪಾಂಡೆ ಅವರು, ರಾಹುಲ್ ಗಾಂಧಿ ವಿರುದ್ಧ ಸಾಕ್ಷಿಗಳು ಕಂಡುಬಂದರೆ, ಅಪರಾಧ ಸಾಬೀತಾದರೆ ಗರಿಷ್ಠ 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು ಎಂದು ಎಚ್ಚರಿಸಿದ್ದಾರೆ.