ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಮೂಲಕ ಯಶಸ್ವಿಯಾಗಿ ಭಾರತ್ ಜೋಡೊ ಯಾತ್ರೆ (Bharat Jodo Yatre) ನಡೆಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಮುಂದುವರಿದ ಭಾಗವಾಗಿ ವಿವಿಧ ವಲಯದ ಜನರನ್ನು ಭೇಟಿ ಮಾಡುತ್ತಿದ್ದಾರೆ. ಇದು ಎರಡನೇ ಹಂತದ ಭಾರತ್ ಜೋಡೊ ಯಾತ್ರೆ ಎಂದು ಕಾಂಗ್ರೆಸ್ (Congress) ವಲಯದಲ್ಲಿ ಚರ್ಚಿಸಲಾಗುತ್ತಿದೆ.
ಮಂಗಳವಾರ ಸಂಜೆ ರಾಹುಲ್ ಗಾಂಧಿ ದೆಹಲಿಯ ಕರೋಲ್ ಬಾಗ್‍ನಲ್ಲಿರುವ ಸೈಕಲ್ ಮೋಟಾರ್ ಮೆಕ್ಯಾನಿಕ್‍ಗಳನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅವರ ಕೆಲಸದಲ್ಲಿ ಸಹಾಯ ಮಾಡಿದ್ದಾರೆ. ಹೀಗೆ ವಿಭಿನ್ನ ವರ್ಗದ ದೈನಂದಿನ ದುಡಿಮೆಯಲ್ಲಿರುವ ಜನರನ್ನು ಭೇಟಿ ಮಾಡುವುದು ಎರಡನೇ ಹಂತದ ಭಾರತ್ ಜೋಡೊ ಯಾತ್ರೆಯ ಉದ್ದೇಶ ಎಂದು ಕೆಲವು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ
Advertisement
Advertisement
ಇದಕ್ಕೆ ಪೂರಕ ಎನ್ನುವಂತೆ ರಾಹುಲ್ ಗಾಂಧಿ (Rahul Gandhi) ದೆಹಲಿಯಿಂದ ಚಂಡೀಗಢದವರೆಗಿನ ಸಂಪೂರ್ಣ ಪ್ರಯಾಣವನ್ನು ಟ್ರಕ್‍ನಲ್ಲಿ ಮಾಡಿದ್ದರು. ಅದಾದ ಬಳಿಕ ಅಮೆರಿಕಾಕ್ಕೆ ತೆರಳಿದ ವೇಳೆ ಅಲ್ಲಿಯೂ ಪಂಜಾಬಿ ಸಮುದಾಯದ ಟ್ರಕ್ ಡ್ರೈವರ್ ಜೊತೆ ಬಹುದೂರ ಪ್ರಯಾಣ ಮಾಡಿದ್ದರು. ಹೀಗೆ ರಾಹುಲ್ ಗಾಂಧಿ ಅವರನ್ನು ಜನರೊಂದಿಗೆ ನೇರವಾಗಿ ಸಂಪರ್ಕಿಸುವುದು ಆ ಮೂಲಕ ಚುನಾವಣೆಯಲ್ಲಿ ಅದರ ಲಾಭ ಪಡೆಯುವ ತಂತ್ರ ಕಾಂಗ್ರೆಸ್ ಮಾಡಿದೆ ಎನ್ನಲಾಗುತ್ತಿದೆ.
Advertisement
ಮೊದಲ ಹಂತದ ಭಾರತ್ ಜೊಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ಸಂಪನ್ಮೂಲ ವ್ಯಕ್ತಿಗಳೇ ಎರಡನೇ ಹಂತದ ಯಾತ್ರೆಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಬೇರೆ ಬೇರೆ ವಲಯದ ಜನರನ್ನು ನೇರವಾಗಿ ಸಂಪರ್ಕಿಸುವ ಲೆಕ್ಕಚಾರ ಮಾಡಿದೆ. ಕೇವಲ ಚುನಾವಣೆ ರಾಜ್ಯಗಳು ಮಾತ್ರವಲ್ಲದೇ ಬಾಕಿ ರಾಜ್ಯಗಳಲ್ಲೂ ಈ ಕಸರತ್ತು ನಡೆಯಲಿದೆ. ಆ ಮೂಲಕ ರಾಹುಲ್ ಗಾಂಧಿ ರಾಜಕೀಯ ಉದ್ದೇಶಗಳಿಗೆ ಈ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಮನವರಿಕೆ ಮಾಡುವ ಪ್ರಯತ್ನವಾಗಿದೆ.
Advertisement
ಎರಡನೇ ಹಂತದ ಯಾತ್ರೆಯು ಮುಂದಿನ ಕೆಲವು ತಿಂಗಳುಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲೂ ವಿಭಿನ್ನ ಪ್ರಯತ್ನದ ಜೊತೆಗೆ ಜನ ಸಾಮಾನ್ಯರ ಜೊತೆಗೆ ರಾಹುಲ್ ಗಾಂಧಿ ಸಭೆ ನಡೆಸಲಿದ್ದಾರೆ.
Web Stories