ಹುಬ್ಬಳ್ಳಿ: ಬಿಜೆಪಿಯವರಿಗೆ ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಬೇಡವಾಗಿದೆ. ಖಾದಿ ಕಾರ್ಮಿಕರ ಹಣವನ್ನು ತೆಗೆದುಕೊಂಡು ದೊಡ್ಡವರ ಜೇಬಿಗೆ ಬಿಜೆಪಿ ಹಾಕುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ನೂತನ ಧ್ವಜ ನೀತಿ ಜಾರಿಗೆ ತಂದಿರುವ ಹಿನ್ನೆಲೆ ಹುಬ್ಬಳ್ಳಿ ಬೆಂಗೇರಿಯಲ್ಲಿನ ರಾಷ್ಟ್ರಧ್ವಜ ನಿರ್ಮಾಣದ ಖಾದಿ ಗ್ರಾಮೋದ್ಯೋಗ ಘಟಕಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ, ಖಾದಿ ಕಾರ್ಮಿಕರ ನೋವು ಆಲಿಸಿದರು. ಇದನ್ನೂ ಓದಿ: ಕಾಂಗ್ರೆಸ್ಸಿಗರ ಒಗ್ಗಟ್ಟು ಎಷ್ಟು ದಿನ ಇರುತ್ತೆ ಅನ್ನೋದು ಪ್ರಶ್ನಾರ್ಥಕ ಸಂಗತಿ: ಸಿ.ಟಿ.ರವಿ
Advertisement
Advertisement
ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಖಾದಿ ಮತ್ತು ಚರಕ ದೇಶದ ಸಂಕೇತ. ಇವೆರಡೂ ದೇಶದ ಗೌರವವನ್ನು ಪ್ರತಿನಿಧಿಸುತ್ತವೆ. ಬಿಜೆಪಿ ರಾಷ್ಟ್ರಧ್ವಜ ತಿದ್ದುಪಡಿ ವಿಚಾರದಲ್ಲಿ ಮಾತ್ರವಲ್ಲ, ನೋಟ್‌ಬ್ಯಾನ್, ಜಿಎಸ್‌ಟಿ, ಕೃಷಿ ಕಾಯ್ದೆ ಇವೆಲ್ಲವೂ ಸಣ್ಣವರ ಬಳಿ ಹಣವನ್ನು ಪಡೆದು ಕೆಲವರ ಜೇಬು ತುಂಬಲು ಜಾರಿಗೆ ಬಂದಿವೆ ಎಂದು ಆರೋಪಿಸಿದರು. ಇದಕ್ಕೂ ಮುನ್ನ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement
Advertisement
75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗಾ'(ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಾದಿಂದ ಪಾಲಿಸ್ಟರ್ ಧ್ವಜ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ವಿಪಕ್ಷಗಳು ಮತ್ತು ಖಾದಿ ಉದ್ಯಮದವರಿಂದ ವಿರೋಧ ವ್ಯಕ್ತವಾಗಿದೆ. ಇದನ್ನೂ ಓದಿ: ಧ್ವಜ ನೀತಿ ಸಂಹಿತೆ ಉಲ್ಲಂಘನೆ – ಶೂ ಹಾಕಿಕೊಂಡು ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರಕ್ಕೆ ಕಾಲಿಟ್ಟ ಖಾಕಿ